ಶಿವಮೊಗ್ಗದ ವಕೀಲರಭವನದ ಹತ್ತಿರ ವಕೀಲರ ಸಂಘದಿಂದ ನಡೆಸುತ್ತಿರುವ ಶಿವಮೊಗ್ಗಕ್ಕೆ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ 2ನೇ ಹಂತದ ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪನವರು ಭಾಗವಹಿಸಿ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿದೆ.
ಈ ಹಿಂದೆಯು ಚಳುವಳಿಗಳನ್ನ ಮಾಡಿ ಒತ್ತಾಯಿಸಿದ್ದೇವೆ. ಈ ಧರಣಿಗೆ ನಮ್ಮ ರೈತ ಸಂಘದ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷರಾದ ಕೆ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಪಿ.ಶೇಖರಪ್ಪ, ಜಿಲ್ಲಾ ಹಸಿರುಸೇನೆ ಸಂಚಾಲಕರಾದ ಎಂ.ಡಿ ನಾಗರಾಜ್, ಭದ್ರಾವತಿ ತಾ ಅಧ್ಯಕ್ಷರಾದ ಜಿ.ಎನ್ ಪಂಚಾಕ್ಷರಿ, ಮುಖಂಡರಾದ ಹೆಚ್.ಎಸ್ ಶೇಖರಪ್ಪ ಹಾಗೂ ಮೊದಲಾದವರು ಹಾಜರಿದ್ದರು.





