ಸಾಗರ | ಅ.21ರಂದು ರಾಷ್ಟ್ರಮಟ್ಟದ ದಸರಾ ಕುಸ್ತಿ ಪಂದ್ಯಾವಳಿ

Date:

ಶಿವಮೊಗ್ಗ ಜಿಲ್ಲೆಯ ಸಾಗರದ ಗಾಂಧಿನಗರ ಯುವಜನ ಸಂಘದಿಂದ 31ನೇ ವರ್ಷದ ರಾಷ್ಟ್ರಮಟ್ಟದ ವಿಜಯದಶಮಿ ಅಂಗವಾಗಿ ಕುಸ್ತಿ ಪಂದ್ಯಾವಳಿಯನ್ನು ಅ.21 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಸಾಗರದ ಸಂಗೊಳ್ಳಿರಾಯಣ್ಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಯುವಜನ ಸಂಘದ ಅಧ್ಯಕ್ಷ ಧರ್ಮರಾಜ್ ಹೇಳಿದರು.

- Advertisement -

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಗಾಂಧಿನಗರ ಯುವಜನ ಸಂಘವನ್ನು ಕೋರಿ ಶಿವಾನಂದಪ್ಪನವರು ಕಳೆದ ೫೧ ವರ್ಷಗಳ ಹಿಂದೆ ಸ್ಥಾಪಿಸಿದ್ದಾರೆ.ಅಂದಿನಿಂದ ಇಂದಿನವರೆಗೂ ಹಲವಾರುಜನ ಕ್ರಿಯಾಶೀಲ ಅಧ್ಯಕ್ಷರು,ಪದಾಧಿಕಾರಿಗಳು ನಿರಂತರ ಕೆಲಸಮಾಡಿದ್ದಾರೆ.ಸಾಂಸ್ಕೃತಿಕ,ಕ್ರೀಡಾ ಉತ್ಸವಗಳನ್ನು ಆಯೊಜಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಯುವಜನ ಸಂಘದ ಕೀರ್ತಿ ವಿಸ್ತರಿಸಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿದ್ದರಾಮಯ್ಯ ನಿರ್ಗಮನ ‘ಅಹಿಂದ’ ಮರಕ್ಕೆ ಕೊಡಲಿ ಏಟು: ಸಮುದಾಯದ...

ಒಂದು ಕಾಲದಲ್ಲಿ ರಾಜ್ಯದ ರಾಜಕಾರಣದ ಗತಿಯನ್ನೇ ಬದಲಿಸಿದ್ದ 'ಅಹಿಂದ' ಚಳವಳಿ ಇಂದು ನಾವಿಕನಿಲ್ಲದ ದೋಣಿಯಾಗಿದೆ. ಸಿದ್ದರಾಮಯ್ಯ ನಿರ್ಗಮನ, ಸ್ಟಿಂಗ್ ಆಪರೇಷನ್ ಆರೋಪ, ಸತೀಶ್ ಜಾರಕಿಹೊಳಿ ಹಿಂದಕ್ಕೆ ಮತ್ತು ಕೆ.ಎನ್. ರಾಜಣ್ಣನವರ ಅನಿಶ್ಚಿತತೆ… ಈ...

ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು...

ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಶಿಕ್ಷಣದ ಬಿಕ್ಕಟ್ಟಿನ ವಿರುದ್ಧ ಯುವ ಸಮೂಹ ಬೀದಿಗಿಳಿದಿದೆ. ಪ್ರಧಾನಿ ಎಡಿ ರಾಮಾ ಸರ್ಕಾರದ ವಿರುದ್ಧ ಅಲ್ಬೇನಿಯಾದಲ್ಲಿ ಭುಗಿಲೆದ್ದ ಜನಾಕ್ರೋಶ...

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

“ಪುರುಷರ ಕುಸ್ತಿ ಪಂದ್ಯಾವಳಿಯ ಜೊತೆಗೆ ಮಕ್ಕಳ ಕುಸ್ತಿ ಹಾಗೂ ಮಹಿಳಾ ಕುಸ್ತಿಗಳ ಆಯೋಜಿಸುವ ಮೂಲಕ ಸಾಂಪ್ರದಾಯಿಕ ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸಿ,ಬೆಳೆಸುವ ಮೂಲಕ ಗಾಂಧಿನಗರ ಯುವಜನ ಸಂಘ ಕ್ರೀಡಾ-ಸಾಂಸ್ಕೃತಿಕ ಕೃಷಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಯುತ್ತದೆ. ಸಂಘದಲ್ಲಿ ಯಾವುದೇ ಆರ್ಥಿಕ ಆಧಾಯವಿಲ್ಲದಿದ್ದರೂ ಪ್ರತಿ ವರ್ಷದ ದಸರಾ ಕುಸ್ತಿಗೆ ಸಾಗರದಿಂದ ಬೆಂಗಳೂರುವರೆಗಿನ ದಾನಿಗಳ ತುಂಬುಹೃದಯದ ಸಹಕಾರವನ್ನು ನಿರಂತರ ಸ್ಮರಿಸುತ್ತೇವೆ” ಎಂದು ಹೇಳಿದರು.

Advertisements

“ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಾಗಿದ್ದರಿಂದ ಕರ್ನಾಟಕದ ದಾವಣಗೆರೆ,ಬೆಳಗಾವಿ,ರೋಣ ಸೇರಿದಂತೆ ಕುಸ್ತಿ ಪಟುಗಳು ಆಗಮಿಸುತ್ತಾರೆ. ಮಹಾರಾಷ್ಟ್ರ,ದೆಹಲಿ,ಹರಿಯಾಣ,ಪಂಜಾಬ್ ಮೊದಲಾದ ರಾಜ್ಯಗಳಿಂದಲೂ ಸಾಗರಕ್ಕೆ ಕುಸ್ತಿಪಟುಗಳು ಆಗಮಿಸುತ್ತಾರೆ.ಮೈಸೂರು ದಸರಾದಲ್ಲಿ ಕುಸ್ತಿ ಪಂದ್ಯಾವಳಿಗೆ ಆಗಮಿಸಿರುವ ನುರಿತ ಕುಸ್ತಿಪಟುಗಳು ನೇರವಾಗಿ ಸಾಗರಕ್ಕೆ ಆಗಮಿಸುತ್ತಾರೆ” ಎಂದು ತಿಳಿಸಿದರು.

10 ಲಕ್ಷ ರೂಗಳ ಅಂದಾಜು ವೆಚ್ಚವಾಗುವಂತಹ ಕುಸ್ತಿಪಂದ್ಯಾವಳಿಯಲ್ಲಿ ಕುಸ್ತಿಪಟುಗಳಿಗೆ ನಮ್ಮ ಶಕ್ತಿಮೀರಿ ಆರ್ಥಿಕ ನೆರವು ಬಹುಮಾನ ರೂಪದಲ್ಲಿ ನೀಡುತ್ತೇವೆ. ವಿಶೇಷವಾಗಿ ಪರ್ಯಾಯ ಬೆಳ್ಳಿಗದೆ, ಬಂಗಾರದ ಬಳೆ ಮತ್ತು ಅಖಾಡ ಬಳೆ, ಪರ್ಸಿ ಬಳೆ ಸೇರಿದಂತೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತಿದೆ ಎಂದರು.

ಮಹಿಳಾ ಕುಸ್ತಿ ಆಯೋಜನೆ:ಕಳೆದ ೧೦ ವರ್ಷಗಳಿಂದ ಮಹಿಳಾ ಕುಸ್ತಿಯನ್ನು ವಿಶೇಷವಾಗಿ ಆಯೋಜಿಸುತ್ತಿದ್ದೇವೆ. ಸಾಗರದ ಇಂದಿರಾಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ೩೨ ಜನ ಮಹಿಳಾ ಕುಸ್ತಿಪಟುಗಳಿದ್ದಾರೆ.ಜೋಗ-ಕಾರ್ಗಲ್ ನಿಂದಲೂ ಕುಸ್ತಿಪಟುಗಳು ಆಗಮಿಸುತ್ತಾರೆ.ದಾವಣಗೆರೆ,ರಾಣೆಬೆನ್ನೂರು ,ಶಿವಮೊಗ್ಗ ,ದಕ್ಷಿಣ ಕನ್ನಡ ಸೇರಿದಂತೆ ವಿವಿಧ ವಿಶ್ವ ವಿದ್ಯಾನಿಲಯಗಳಿಂದಲೂ ಮಹಿಳಾ ಕುಸ್ತಿಪಟುಗಳು ಸಾಗರಕ್ಕೆ ಈ ಕುಸ್ತಿ ಪಂದ್ಯಾವಳಿಗೆ ಆಗಮಿಸುತ್ತಾರೆ ಎಂದರು.

ಉದ್ಘಾಟನೆ ಮತ್ತು ವೇದಿಕೆ ಕಾರ್ಯಕ್ರಮ:

ಗಾಂಧಿನಗರ ಯುವಜನ ಸಂಘದಿಂದ ೫೧ನೇ ವರ್ಷದ ರಾಷ್ಟ್ರಮಟ್ಟದ ವಿಜಯದಶಮಿ ಅಂಗವಾಗಿ ಕುಸ್ತಿ ಪಂದ್ಯಾವಳಿಯನ್ನು ಕ್ಷೇತ್ರ ಶಾಸಕರು,ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸುವರು.ಹಿರಿಯ ಮುತ್ಸದ್ದಿ ರಾಜಕಾರಣಿ ದೇವರಾಜು ಅರಸು ಪ್ರಶಸ್ತಿ ಪುರಸ್ಕೃತರುರಡು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ ಪಡೆದ ಕರ್ನಾಟಕ ರಾಜ್ಯದ ವಿಧಾನಸಭೆಯ ಮಾಜಿ ಸ್ಪೀಕರ್ ಕಾಗೋಡುತಿಮ್ಮಪ್ಪನವರು ಆಗಮಿಸುವರು.

ಪ್ರಮುಖವಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕುಸ್ತಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.ಸಾಗರದ ವಿವಿಧ ಪ್ರಮುಖ ಗಣ್ಯಾತಿಗಣ್ಯರು ಆಗಮಿಸಲಿದ್ದು,ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ಮೂಲಕ ರಾಷ್ಟ್ರಮಟ್ಟದ ವಿಜಯದಶಮಿ ಕುಸ್ತಿ ಪಂದ್ಯಾವಳಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು ಸರಿಯೇ?

ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ...

SIR ಅಕ್ರಮ | ‘ನಾವೇ ಸತ್ತಿದ್ದೇವೆ’ ಎಂದು 37 ಮಂದಿ ಹೆಸರಿನಲ್ಲಿ ಫಾರ್ಮ್‌-7 ಸಲ್ಲಿಕೆ; ಪರಸ್ಪರರು ಸತ್ತಿದ್ದಾರೆಂದು ಘೋಷಿಸಿಕೊಂಡಿವೆ 334 ಜೋಡಿಗಳು!

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ (SIR) ಪ್ರಕ್ರಿಯೆಯಲ್ಲಿ ಮತ್ತೊಂದು ಆಘಾತಕಾರಿ ಮತ್ತು ಬೆಚ್ಚಿಬೀಳಿಸುವ...

ಮುಂಬೈ | ಸಾಹಿಲ್ ವಾಕೋಡೆ ಸಾವು: ಮಗನ ತಿಥಿಯಂದೇ ಪೋಷಕರು, ವಿದ್ಯಾರ್ಥಿಗಳ ಬಂಧನ

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ನಿಧನವಾಗಿ ಒಂದು ತಿಂಗಳ...