ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಶಿವಮೊಗ್ಗದಲ್ಲಿ ಎಫ್‌ಐಆರ್ ದಾಖಲಾಗಿದೆ.
ನಿನ್ನೆ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದ ಅರುಣ್ಕುಮಾರ್ ಪುತ್ತಿಲ, ನಿಷೇಧಾಜ್ಞೆಯ ನಡುವೆಯೇ ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ಸ್ವಯಂಪ್ರೇರಿತ(ಸುವೋ-ಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈದ್ ಜಾಥದಲ್ಲಿ ಮತಾಂಧರಿಗೆ ತಲವಾರು ಹಿಡಿಯಲು ಕಾಂಗ್ರೇಸ್ ಅವಕಾಶ ನೀಡ್ತದೆಂತಾದರೆ ಹಿಂದೂಗಳು ತಲವಾರು ಹಿಡಿಯುವುದು ಅನಿವಾರ್ಯ ಮತ್ತು ಅವಶ್ಯಕವೂ ಆಗ್ತದೆ. ಜಾತಿ, ಪಕ್ಷ ನೋಡಿ ದಾಳಿ ನಡೆದಿಲ್ಲ ಎನ್ನುವುದು ಓಲೈಕೆ ರಾಜಕಾರಣ ಮಾಡುವ @INCKarnataka ಗರಿಗೆ ತಿಳಿದಿರಲಿ. ಅನ್ಯಾಯಕ್ಕೊಳಕ್ಕಾದ ಹಿಂದೂಗಳಿಗಾಗಿ ಸಾವಿರ ಕೇಸು ಎದುರಿಸಲು ಸಿದ್ದ pic.twitter.com/CUp2M9t07D
— ArunKumar Puthila (@ArunPutthila) October 7, 2023
ರಾಗಿಗುಡ್ಡದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ಅಲ್ಲಿಗೆ ಭೇಟಿ ನೀಡಿದ್ದ ಪುತ್ತಿಲ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ, “ಹಿಂದೂಗಳು ಸ್ಕ್ರೂಡ್ರೈವರ್, ಸ್ಯ್ಪಾನರ್ ಬಿಟ್ಟು ತಲವಾರುಗಳಿಗೆ ಪೂಜೆ ಮಾಡಬೇಕು. ಅಗತ್ಯ ಬಿದ್ದರೆ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಸಿದ್ಧರಾಗಬೇಕು’ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 153A ಕಾಯ್ದೆಯಡಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಆಚರಣೆಯಲ್ಲಿ ಮತಾಂಧ ಟಿಪ್ಪು, ಔರಂಗಜೇಬನನ್ನು ವೈಭವೀಕರಿಸಿ ಕಾಂಗ್ರೇಸ್ ಓಲೈಕೆಯಿಂದ ತಲವಾರು ಪ್ರದರ್ಶಿಸಿ ನಂತರ ಭಯಾನಕ ಹಿಂಸಾಚಾರ ನಡೆದ ಹಿಂದೂಗಳ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದೆವು.
ಓಲೈಕೆ ರಾಜಕಾರಣವನ್ನು ಕಾಂಗ್ರೇಸ್ ಅಂತ್ಯಗೊಳಿಸಲೇಬೇಕು#Shimoga #AntiHinduCongress pic.twitter.com/McecZTsfP5— ArunKumar Puthila (@ArunPutthila) October 7, 2023