ಶಿವಮೊಗ್ಗ ನಗರದಲ್ಲಿ ದಿನಕಳದಂತೆ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ಸುಗಮ ಸಂಚಾರಕ್ಕಾಗಿ ಪಾರ್ಕಿಂಗ್ ವ್ಯವಸ್ಥೆಗೆ ತಿಣಕಾಡುವಂತಾಗಿದೆ. ನಗರದಲ್ಲಿರುವ ಈ ಸಮಸ್ಯೆಯನ್ನು ನಿಭಾಯಿಸಲು ಪಾಲಿಕೆ ಇಂಜಿನಿಯರ್ ಹಾಗೂ ಸಂಚಾರಿ ಪೊಲೀಸರು ಒಂದು ಹೊಸ ಮಾರ್ಗವನ್ನು ಕಂಡುಹಿಡಿದಿದ್ದು. ನಗರದ ತಿಲಕ್ ನಗರ, ಪಾರ್ಕ್ ಬಡಾವಣೆ, ದುರ್ಗಿಗುಡಿಯಲ್ಲಿ ಆಸ್ಪತ್ರೆಗಳು ಹೆಚ್ಚಾಗಿದೆ ಹೀಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಪಾಲಿಕೆ ಹಾಗೂ ಸಂಚಾರಿ ಪೊಲೀಸ್ ಇಲಾಖೆಯ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲು ಬಳಸಿಕೊಳ್ಳಲು ಮುಂದಾಗಿದೆ.
ತಿಲಕ್ ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆ ಅದರ ಸುತ್ತಮುತ್ತಲಿನ ರಸ್ತೆಗಳು ಹಾಗೂ ದುರ್ಗಿಗುಡಿ ಈ ಭಾಗದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು.ಈ ಹಿನ್ನೆಲೆಯಲ್ಲಿ ಈ ಮೂರು ಬಡಾವಣೆಗಳ 21 ಕನ್ಸರ್ವೆನ್ಸಿ ಗಳನ್ನು ಪಾಲಿಕೆ ಇಂಜಿನಿಯರ್ ಭರತ್ ಕುಮಾರ್ ಹಾಗೂ ಸಂಚಾರಿ ಪೊಲೀಸ್ ನ ಸಿಪಿಐ, ದೇವರಾಜ್ ಪಿ ಐ ನವೀನ್ ಕುಮಾರ್ ಮಠಪತಿ ಹಾಗೂ ಸಿಬ್ಬಂದಿಗಳ ಸಹಾಯದಿಂದ 21 ಕನ್ಸರ್ವೆನ್ಸಿಗಳನ್ನು ನಗರದಲ್ಲಿ ಸರ್ವೆ ಮಾಡಲಾಗಿದೆ.
ಈ ಮೂರು ಬಡಾವಣೆಗಳ 21 ಕನ್ಸರ್ವೆನ್ಸಿ ಗಳನ್ನು ಪಾಲಿಕೆ ಇಂಜಿನಿಯರ್ ಭರತ್ ಕುಮಾರ್ ಹಾಗೂ ಸಂಚಾರಿ ಪೊಲೀಸ್ ನ ಸಿಪಿಐ, ದೇವರಾಜ್ ಪಿ ಐ ನವೀನ್ ಕುಮಾರ್ ಮಠಪತಿ ಹಾಗೂ ಸಿಬ್ಬಂದಿಗಳ ಸಹಾಯದಿಂದ 21 ಕನ್ಸರ್ವೆನ್ಸಿಗಳನ್ನು ಸರ್ವೆ ಮಾಡಲಾಗಿದೆ.

ಈ ಸಂಬಂಧ ಎಸ್ಪಿ ಮಿಥುನ್ ಕುಮಾರ್.ಜಿ.ಕೆ ನೇತೃತ್ವದಲ್ಲಿ ನಗರದ ಸರ್ಜಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ, ಆಸ್ಪತ್ರೆಗಳ ಮುಖ್ಯಸ್ಥರ ಸಭೆಯನ್ನ ನಡೆಸಲಾಗಿದೆ. ಸ್ಮಾರ್ಟ್ ಸಿಟಿಯಿಂದ ಕನ್ಸರ್ ವೆನ್ಸಿಯನ್ನ ಅಭಿವೃದ್ಧಿ ಪಡಿಸಲಸಗಿದ್ದು, ಅದನ್ನ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆಸ್ಪತ್ರೆಗೆ ಬರುವ ವಾಹನಗಳನ್ನ ರಸ್ತೆಯ ಮೇಲೆ ಪಾರ್ಕಿಂಗ್ ಮಾಡುವುದರಿಂದ ರಿಯಾತಿ ದರದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಭೆಯಲ್ಲಿ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು – 1, ಶಿವಮೊಗ್ಗ, ಸಂಜೀವ್ ಕುಮಾರ್ ಡಿಎಸ್ಪಿ ಶಿವಮೊಗ್ಗ-ಬಿ ಉಪ ವಿಭಾಗ, ಭರತ್ ಮಹಾನಗರ ಪಾಲಿಕೆಯ ಇಂಜಿನಿಯರ್, ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಕಾರ್ಪೊರೇಷನ್ ಇಂಜಿನಿಯರ್ ಗಳು ಮತ್ತು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಆಡಳಿತ ಮಂಡಳಿಯ ಅಧಿಕಾರಿ ಹಾಗೂ ವೈಧ್ಯಾಧಿಕಾರಿಗಳು ಉಪಸ್ಥಿತರಿದ್ದರು.