ಕರ್ನಾಟಕ ರಾಜ್ಯ ಒಕ್ಕೂಟ (ರಿ.), ಬೆಂಗಳೂರು, ಅಹಿಂದ ಕರ್ನಾಟಕ ರಾಜ್ಯ ಒಕ್ಕೂಟದ ವತಿಯಿಂದ ಶಿವಮೊಗ್ಗದ ಹೊಸಮನೆ ನಿವಾಸಿ ಸ್ಟೆಲ್ಲಾ ಮಾರ್ಟಿನ್ಅವರನ್ನು ಅಹಿಂದ ಸಂಘಟನೆ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
- Advertisement -
ಘಟಕ ಸಮಿತಿಯ ಮುಂದಿನ ಆದೇಶದವರೆಗೆ ಈ ನೇಮಕಾತಿ ಮಾಡಲಾಗಿದ್ದು, ನೇಮಕಾತಿ ಪತ್ರವನ್ನು ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಮನಿ ಅವರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಟೆಲ್ಲಾ ಮಾರ್ಟಿನ್ “ನನಗೆ ನೀಡಿರುವ ಜವಾಬ್ದಾರಿಯನ್ನ ಸಾಮಾಜಿಕ ಕಳಕಳಿಯೊಂದಿಗೆ ಅಹಿಂದ ಒಕ್ಕೂಟದ ನಿಯಮಗಳಿಗೆ ಬದ್ಧವಾಗಿ ನಿರ್ವಹಿಸುವೆ” ಎಂದು ತಿಳಿಸಿದ್ದಾರೆ.





