ಶಿವಮೊಗ್ಗ | ಜಿಲ್ಲಾಡಳಿತದಿಂದ ಆ.16 ರಂದು ಶ್ರೀ ಕೃಷ್ಣ ಜಯಂತಿ ಆಚರಣೆ

Date:

Advertisements

ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ (ಯಾದವ) ಸಂಘ ಶಿವಮೊಗ್ಗ ಇವರ ಸಂಯುಕ್ತಶ್ರಾಯದಲ್ಲಿ ಆಗಸ್ಟ್ 16 ರ ಬೆಳಿಗ್ಗೆ 11.00 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಕೃಷ್ಣ ಜಯಂತಿಯನ್ನು ಆಯೋಜಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸುವರು.

ವಿಶೇಷ ಆಹ್ವಾನಿತರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಆಗಮಿಸುವರು. ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎಸ್. ಚನ್ನಬಸಪ್ಪ ವಹಿಸುವರು.

Advertisements

ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಗೊಲ್ಲರ(ಯಾದವ)ಸಂಘದ ಅಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ. ಸಿಇಓ, ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿಗಳು ಮತ್ತು ವಿವಿಧ ಸಂಘಟನೆಯ ಮುಖಂಡರು ಪದಾಧಿಕಾರಿಗಳು ಭಾಗವಹಿಸುವರು.

ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಜಿ.ಕೆ. ಪ್ರೇಮ ಇವರು ವಿಶೇಷ ಉಪನ್ಯಾಸವನ್ನು ನೀಡುವರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಾಳೆ ಕವಿ ಮೂಡ್ನಾಕೂಡು ಚಿನ್ನಸ್ವಾಮಿರಿಂದ, ದಲಿತ ಸಾಂಸ್ಕೃತಿಕ ಚಿಂತನೆ ಕುರಿತು ವಿಚಾರ ಮಂಥನ

ಶಿವಮೊಗ್ಗ, ಕುವೆಂಪು ವಿ.ವಿ. ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ, ಡಿವಿಎಸ್...

ಶಿಕಾರಿಪುರ | ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ 1 ವರ್ಷ 8 ತಿಂಗಳ ಪುಟಾಣಿ

ಶಿಕಾರಿಪುರ, ತಾಲೂಕಿನ ಕಾಳೇನಹಳ್ಳಿ ಗ್ರಾಮದ ಒಂದು ವರ್ಷ ಎಂಟು ತಿಂಗಳ ಪುಟಾಣಿ...

ಸೊರಬ | ತಳ ಸಮುದಾಯದ ಪರ ಹೋರಾಟ ಮಾಡುವುದು ಅವಿಭಾಜ್ಯ ಅಂಗ : ನಟ ಚೇತನ್ ಅಹಿಂಸ

ಸೊರಬ, ವ್ಯೆಯಕ್ತಿಕವಾಗಿ ನಮ್ಮ ಪರಿಶ್ರಮ ಹಾಗೂ ಬೆವರು ಸುರಿಸಿ ಉತ್ತಮ ಸ್ಥಾನಕ್ಕೆ...

ಶಿವಮೊಗ್ಗ | ರಸ್ತೆ ಡಾಂಬರೀಕರಣಕ್ಕೆ ಆಯುಕ್ತರಿಗೆ ಮನವಿ

ಶಿವಮೊಗ್ಗ, ನಗರದ ಗೋಪಾಳದ ಕನಕದಾಸ ವೃತ್ತದಿಂದ ಬೈಪಾಸ್ ರಸ್ತೆಯು ಅನೇಕ ಬಡಾವಣಿಗಳು,...

Download Eedina App Android / iOS

X