ಮಾದಕ ದ್ರವ್ಯಗಳ ದುಷ್ಪರಿಣಾಮ ಮತ್ತು ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಸೊಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ (ಶಿವಮೊಗ್ಗ ಘಟಕ) ವತಿಯಿಂದ ʻಸಬಲ ಯುವಕರು- ಜಾಗೃತ ಮನಸ್ಸು, ಸುರಕ್ಷಿತ ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಸೊರಬದಲ್ಲಿ ಬೃಹತ್ ಜಿಲ್ಲಾ ಮಟ್ಟದ ಜನಜಾಗೃತಿ ಜಾಥಾ ಮತ್ತು ಯುವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಸಮಾವೇಶವು ಅಕ್ಟೋಬರ್ 25, 2026 ರಂದು ಮಧ್ಯಾಹ್ನ 3 ಗಂಟೆಗೆ ಸೊರಬದ ಜಾಮಿಯ ಮಸೀದಿ ಮಾರ್ಕೆಟ್ ರಸ್ತೆ ಮುಂಭಾಗದಿಂದ ಪ್ರಾರಂಭವಾಗಲಿದೆ.
ಅಧ್ಯಕ್ಷತೆಯನ್ನು ಸೊಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷ ಡಾ. ನಸೀಂ ಅಹ್ಮದ್ ವಹಿಸಲಿದ್ದಾರೆ. ಸಮಾವೇಶದಲ್ಲಿ ಹಲವು ಪ್ರಮುಖರು ಭಾಗವಹಿಸಲಿದ್ದಾರೆ. ಡಾ. ತಾಹಾ ಮತ್ತೀನ್ ಸಾಬ್ (ಸದಸ್ಯರು, ಸಲಹಾ ಸಮಿತಿ, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ) ಅಬೀದ್ ಶಾಫಿ (ಸದಸ್ಯರು, ಸಲಹಾ ಸಮಿತಿ, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ) ಮಹಾಂತೇಶ್ ಕೆ ಲಂಬಿ (ಪೋಲಿಸ್ ವೃತ್ತ ನಿರೀಕ್ಷಕರು, ಸೊರಬ ಪೋಲಿಸ್ ಠಾಣೆ, ಸೊರಬ) ಜನಾಬ್ ಇನಾಯತ್ ಉಲ್ಲಾ ಸಾಬ್ ಜನಾಬ್ ಸಯದ್ ನಜೀರ್ ಅಹ್ಮದ್ ಸಾಬ್ ಭಾಗವಹಿಸಲಿದ್ದಾರೆ.






