ಆಧುನಿಕತೆ ಬೆಳೆದಂತೆ ವಿದ್ಯಾರ್ಥಿ ಜೀವನದಲ್ಲೂ ಬದಲಾವಣೆ ಆಗುತ್ತಿದೆ. ಹಲವು ರೀತಿಯ ಆಮಿಷಗಳಿಗೆ ತುತ್ತಾಗಿ, ವಿದ್ಯಾರ್ಥಿಗಳು, ಯುವ ಜನರು ಮಾದಕ ದ್ರವ್ಯದಂತಹ ದುಶ್ಚಟಕ್ಕೆ ಬಲಿಯಾಗುತ್ತಿದ್ದು ಇದರಿಂದ ಸಮಾಜದಲ್ಲಿ ಯುವ ಜನರು ಕೆಡುಕಿನಡೆಗೆ ಹೋಗುತ್ತಿದ್ದಾರೆ.
ವಿದ್ಯಾರ್ಥಿ ಜೀವನ ದುಶ್ಚಾಟ ಮುಕ್ತವಾಗಬೇಕಾದರೆ ಇಂಥ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನಂಜ ನಾಯ್ಕ್ ಹೇಳಿದರು.
ಅವರು ಇಂದು ಭಂಡಾರ್ ಕಾರ್ಸ್ ಕಾಲೇಜ್, ಎನ್ ಎಸ್ ಎಸ್, ಎನ್ ಎನ್ ಒ ಕಮ್ಯುನಿಟಿ ಸೆಂಟರ್ ಕುಂದಾಪುರ, ಜೆಸಿಐ ಕುಂದಾಪುರ ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಭಂಡಾರ್ ಕಾರ್ಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಗುಟ್ಕಾ ಹಾಗು ಮಾದಕ ದ್ರವ್ಯ ಗಳ ಬಗ್ಗೆ ಜಾಗ್ರತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ ಕಾರ್ಸ್ ಕಾಲೇಜ್ ನ ಪ್ರಾಂಶುಪಾಲರಾದ ಶುಭಕರ ಆಚಾರಿ ವಹಿಸಿದ್ದರು. ಮಾನಸಿಕ ತಜ್ಞ ಡಾ ಪ್ರಕಾಶ್ ತೋಳಾರ್ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಎನ್ ಎನ್ ಒ ಕಮ್ಯುನಿಟಿ ಸೆಂಟರ್ ನ ಪ್ರದಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜ್ ನ ಪ್ರಾಂಶುಪಾಲರಾದ ಜಿ ಎಮ್ ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಪ್ರೊ ಸತ್ಯನಾರಾಯಣ ಹತ್ವಾರ್, ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷ ಯೂಸುಫ್ ಸಲೀಮ್, ನಿಕಟ ಪೂರ್ವ ಅಧ್ಯಕ್ಷ ರಾಘವೇಂದ್ರ ಕುಲಾಲ್, ಪೂರ್ವ ಅಧ್ಯಕ್ಷೆ ಡಾ ಸೋನಿ, ಎನ್ ಎಸ್ ಎಸ್ ಅಧಿಕಾರಿಗಳಾದ ಅರುಣ್ ಏ ಎಸ್, ರಾಮಚಂದ್ರ ಆಚಾರ್ ಇನ್ನಿತರರು ಉಪಸ್ಥಿತರಿದ್ದರು. ಕಾಲೇಜ್ ನ ವಿದ್ಯಾರ್ಥಿಗಳಾದ ಸಮೀಕ್ಷಾ ಸ್ವಾಗತಿಸಿದರು, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು, ಕಿಶನ್ ಧನ್ಯವಾದ ಅರ್ಪಿಸಿದರು.
