ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಲಿದ್ದಾರೆ ಎಂದು ಹಿರಿಯ ಶಾಸಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದರು.
ಉತ್ತರ ಕನ್ನಡದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಬದಲಾವಣೆ ಮಾತು ನಮ್ಮ ಪಕ್ಷದಲ್ಲಿ ಇಲ್ಲ. ಅದು ವಿರೋಧ ಪಕ್ಷದ ಮಾತು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. 2013ರಲ್ಲಿ ಇದ್ದ ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಇಲ್ಲಾ ಎನ್ನುವುದು ಕೆಲವರ ಪ್ರಶ್ನೆ. ಅವರಿಗೆ ವಯಸ್ಸಾಯ್ತು ಹಿಂದಿನ ಸಿದ್ದರಾಮಯ್ಯರೇ ಇರಲು ಹೇಗೆ ಸಾಧ್ಯ? ಹಾಗೆ ನನಗೂ ವಯಸ್ಸಾಗಿದೆ. ಹಿಂದಿನ ರೀತಿಯಲ್ಲಿಯೇ ಇರಲು ಸಾಧ್ಯವಾಗುತ್ತಾ” ಎಂದು ಪ್ರಶ್ನಿಸಿದರು.
“ಆದರೆ, ಅವರಿಗೆ ತಾಳ್ಮೆ ಇದೆ. ಆಡಳಿತ ಮಾಡುವ ಶಕ್ತಿ ಇದೆ. 5ವರ್ಷ ಅವರು ಮುಖ್ಯಮಂತ್ರಿ ಆಗಿ ಮುಂದವರೆಯಲ್ಲಿದ್ದಾರೆ ಸಿ.ಎಂ ಬದಲಾವಣೆ ಚರ್ಚೆ ನಮ್ಮಲ್ಲಿ ಆಗಿಲ್ಲಾ. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ” ಎಂದು ಪುನರುಚ್ಚರಿಸಿದರು.
“ದಸರಾ ನಂತರ ಸಿಎಂ ಬದಲಾವಣೆ ಆಗಲಿದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಅವರ ಹೇಳಿಕೆಗೆ, “ಅಶೋಕ್ ಅವರು ಹಾಗೆ ಹೇಳಲೇಬೇಕು. ಇಲ್ಲಾ ಅಂದರೆ ಅವರು ಬದಕುಬೇಕಲ್ಲಾ? ಅವರು ಬಡಪಾಯಿ, ಇಲ್ಲಾವಾದರೆ ಅವರನ್ನೇ ಬದಲಾವಣೆ ಮಾಡಿಬಿಡುತ್ತಾರೆ. ಅಶೋಕ್ ಅವರು ಸಿಎಂ ಬದಲಾವಣೆಯನ್ನು ನಿದ್ದೆಗಣ್ಣಿನಲ್ಲಿ ಹೇಳಿರಬೇಕು. ಹಾಗೆಯೇ ಶಾಸಕರು ಮಾಧ್ಯಮದವರ ಕೈಗೆ ಸಿಗಬಾರದು. ಸಿಕ್ಕರೆ ಏನೇನೋ ಹೇಳಿಕೆಗಳು ಹೆಡ್ಡಿಂಗ್‌ನಲ್ಲಿ ಬರ್ತಾವೆ” ಎಂದರು.
ಇದನ್ನೂ ಓದಿ: ದೇವನಹಳ್ಳಿ ರೈತರ ಜೊತೆ ಜು.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ
ಸರ್ಕಾರ ರಚನೆ ಆದ ದಿನದಿಂದ ಇಂದಿನವರೆಗೂ ದಿನಕಳದಂತೆ ಇನ್ನೂ ಹೆಚ್ಚು ಗಟ್ಟಿಯಾಗಿದೆ. ಹೈಕಮಾಂಡ್ ಸಂಪೂರ್ಣ ಬೆಂಬಲ ಇದೆ. ನಮ್ಮ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಸಚಿವರು ಎಲ್ಲರೂ ಕೂಡಿ ಕೆಲಸ ಮಾಡ್ತಾ ಇದ್ದಾರೆ. ಆದ್ದರಿಂದ ಬದಲಾವಣೆ ಬಗ್ಗೆ ಚರ್ಚೆ ಇಲ್ಲ” ಎಂದು ಸ್ಪಷ್ಟಪಡಿಸಿದರು.