ಸಿಂದಗಿ | ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ಗೆ ಹೋಗುವ ದಾರಿ ಕೆಸರುಮಯ

Date:

Advertisements

ಸಿಂದಗಿ ಪಟ್ಟಣದ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕಿಗೆ ರಜ್ಜು(ರಾಡಿ) ತೊಳೆದುಕೊಂಡೇ ಹೋಗಬೇಕು. ಕೋಟಿಗೂ ಅಧಿಕ ವೆಚ್ಚದ ಈ ವೃಕ್ಷೋದ್ಯಾನಕ್ಕೆ ಬರಲು ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಅಂದಾಜು ಎರಡು ನೂರು ಮೀಟರ್ ಉದ್ದದ ಈ ರಸ್ತೆಯಲ್ಲಿ 100 ಮೀಟರ್‌ಗೂ ಹೆಚ್ಚು ಕೆಸರಿನ ದಾರಿ ಇದೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಾಲುಮರದ ತಿಮ್ಮಕ್ಕನ ಟ್ರೀ ಪಾರ್ಕಿಗೆ ಕೆಲ ದಿನಗಳ ಹಿಂದೆ 12ನೇ ವಾರ್ಡನ ಹೊನ್ನಪ್ಪ ಗೌಡ ಲೇಔಟಿನಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದ ಟ್ರೀ ಪಾರ್ಕನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆಗೊಳಿಸಿದ್ದರು. ಆದರೆ ಈಗ ಹಾದಿಯ ತುಂಬೆಲ್ಲ ಮಳೆ ನೀರಿನಿಂದ ರಾಡಿ ತುಂಬಿಕೊಂಡಿದೆ.

ಪಟ್ಟಣವು ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಸುಂದರಮಯಗೊಳಿಸುವ ನಿಟ್ಟಿನಲ್ಲಿ ಸಾಲುಮರದ ತಿಮ್ಮಕ್ಕನ ಟ್ರೀ ಪಾರ್ಕ್ ಪ್ರಾರಂಭಿಸಿದ್ದಾರೆ. ಆದರೆ, ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ವ್ಯವಸ್ಥೆ ಮುಂತಾದ ಸಮಸ್ಯೆಗಳ ಬಗ್ಗೆ ಗಮನ ಹರಿಸದಿರುವುದು ಬೇಸರದ ವಿಷಯ ಎನ್ನುತ್ತಾರೆ ಸಾರ್ವಜನಿಕರು.

Advertisements
ಸಾಲು ಮರದ ತಿಮ್ಮಕ್ಕ ಪಾರ್ಕ್

ಪಾರ್ಕಿಗೆ ಬರುವ ಜನರು ಅದೇ ರಾಡಿ ತುಳಿದು ಬರುವುದರಿಂದ ಪಾರ್ಕ್ ರಸ್ತೆಗಳಲ್ಲಿ ಪಾದಗಳ ಚಿತ್ತಾರ ಮೂಡುತ್ತಿದೆ. ರಾಡಿಮಯವಾಗಿ ಸ್ವಚ್ಛತೆ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ರಸ್ತೆ ಸಮಸ್ಯೆಯಿಂದ ಆಗುತ್ತಿರುವ ಅದ್ವಾನಗಳಿಗೆ ಮುಕ್ತಿ ತೋರಬೇಕಿದೆ.

ಪಾರ್ಕನ ಸುತ್ತಲಿನ ಒಳ ಆವರಣ ಅನರ್ಮಲ್ಯದಿಂದ ಕೂಡಿದೆ. ದಿನವೂ ಮಳೆ ಸುರಿಯುತ್ತಿದ್ದು, ಇಡಿ ಪಾರ್ಕ್ ನೀರಿನ ಮಂಡದಂತಾಗಿದೆ. ಹರ ಹರಳು ಮಳೆ ನೀರಿನಿಂದ ತುಂಬಿ ತುಳುಕುತ್ತಿದೆ. ಪಾರ್ಕಿಗೆ ಬರುವ ಸಾರ್ವಜನಿಕರು ರಸ್ತೆಯ ಸುಧಾರಣೆ, ಒಳ ಹಾಗು ಹೊರ ಹವರಣದ ಸ್ವಚ್ಛತೆಗೆ ಕ್ರಮವಹಿಸಿ ಹಸಿರು ವನಕ್ಕೆ ಕೆಸರು ದಾರಿಯಿಂದ ಮುಕ್ತಿಗೊಳಿಸಬೇಕು ಎಂದು ಸಂಬಂಧಿಸಿದೆ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.‌

ಸಾಲು ಮರದ ತಿಮ್ಮಕ್ಕ ಪಾರ್ಕ್‌ಗೆ ಹೋಗುವ ದಾರಿ

ಈ ದಿನ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ಪುರಸಭೆ ಸದಸ್ಯ ಮಹಾಂತಗೌಡ ಬಿರಾದಾರ ಮಾತನಾಡಿ, ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯ ಅಧಿಕಾರಿಗಳಿಗೆ 12ನೇ ವಾರ್ಡಿಗೆ ರಸ್ತೆ ನಿರ್ಮಿಸಿ ಎಂದು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಪ್ರಯೋಜನವಾಗಿಲ್ಲ. ಶಾಸಕರ ಗಮನಕ್ಕೆ ತಂದಿದ್ದೇವೆ. ಟ್ರೀ ಪಾರ್ಟಿಗೆ ಹೋಗುವ ಪ್ರಮುಖ ರಸ್ತೆ ನಿರ್ಮಿಸಲು ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಅಂಗವಿಕಲ ಸಹೋದರಿಯರಿಗೆ ಕೆಎಲ್‌ಇ ಸೊಸೈಟಿಯಿಂದ ʼಸಹಾಯ ಹಸ್ತʼ

ಸಾಮಾಜಿಕ ಹೋರಾಟಗಾರರಾದ ಶರಣು ಸಿಂಧೆ ಮಾತನಾಡಿ, ಶಾಸಕರು ಪಟ್ಟಣದ ಜನತೆಯ ಹಿತದೃಷ್ಟಿಯಿಂದ ಎರಡು ಕೋಟಿ ರೂ ವೆಚ್ಚದಲ್ಲಿ ಟ್ರೀ ಪಾರ್ಟ್ ನಿರ್ಮಿಸಿದ್ದಾರೆ. ಆದರೆ, ಅಲ್ಲಿಗೆ ಹೋಗಲು ಸೂಸಜ್ಜಿತವಾದ ರಸ್ತೆ ಇಲ್ಲದ ಕಾರಣ ವಾಯುವಿಹಾರಿಗಳಿಗೆ ಹಾಗೂ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೆ ಪುರಸಭೆಯವರು ರಸ್ತೆ ನಿರ್ಮಿಸಿ ಸುತ್ತ ಮುತ್ತಲು ನೈರ್ಮಲ್ಯ ಕಾಪಾಡಬೇಕು ಎಂದರು.

ಇನ್ನಾದರೂ ಜನಪ್ರತಿನಿಧಿಗಳಾಗಿರಲಿ, ಅಧಿಕಾರಿಗಳಾಗಿರಲಿ ಇತ್ತ ಗಮನಹರಿಸಿ ಪರಿಹರಿಸುವವರೇ ಕಾದು ನೋಡಬೇಕಿದೆ.

WhatsApp Image 2025 02 05 at 18.09.20 1
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X