ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಬಸ್ ನಲ್ಲಿದ್ದ 16 ಜನ ಪ್ರಯಾಣಿಕರಿಗೆ ಗಂಭೀರ ಗಾಯಗೊಂಡ ಸಿಂಧನೂರು ನಗರದ ಪಿಡಬ್ಲ್ಯೂ ಕ್ಯಾಂಪ್ ನ ಆಕ್ಸ್‌ಫರ್ಡ್ ಕಾಲೇಜಿನ ಬಳಿ ನಡೆದಿದೆ.
ಸಾರಿಗೆ ಬಸ್ ರಾಯಚೂರು ನಿಂದ ಕೊಪ್ಪಳ ಕಡೆಗೆ ಹೊರಟಿತ್ತು ಆಕಡೆಯಿಂದ ಬರುತ್ತಿದ್ದ ಲಾರಿಯ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ.ಬಸ್ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು |ಆಹಾರ ಇಲಾಖೆ ಅಧಿಕಾರಿಗೆ ಅಪಮಾನ ಖಂಡಿಸಿ ನೌಕರರ ಸಂಘ ಪ್ರತಿಭಟನೆ
ಭೀಕರ ರಸ್ತೆ ಅಪಘಾತದಲ್ಲಿ ಬಸ್ ನಲ್ಲಿದ್ದ 16 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳಾ ಪ್ರಯಾಣಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ಎಲ್ಲಾ ಗಾಯಾಳುಗಳನ್ನು ತಕ್ಷಣವೇ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
