ಸಿಂಧನೂರು ತಾಲೂಕಿನ ಜವಳಗೇರಾ ನಾಡಗೌಡ ಎಂಬವರು ಅಕ್ರಮವಾಗಿ ವಶಪಡಿಸಿಕೊಂಡಿರುವ 62 ಎಕರೆ ಹೆಚ್ಚುವರಿ ಭೂಮಿಯನ್ನು ಕೂಡಲೇ ಭೂಹೀನರಿಗೆ ವಿತರಿಸಬೇಕು ಎಂದು ಒತ್ತಾಯಿಸಿ ಸಿಪಿಐ(ಎಂಎಲ್) ರೆಡ್ ಸ್ಟಾರ್ ಮತ್ತು ಕರ್ನಾಟಕ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ರಸ್ತೆ ತಡೆದು ಪ್ರತಿಭಟಿಸುತ್ತಿದ್ದ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಂಧನೂರು ಸರ್ವೆ ನಂ. 419 ಮತ್ತು ಸುಲ್ತಾನಪೂರ ಸರ್ವೆ ನಂ.186ರಲ್ಲಿರುವ ನಾಡಗೌಡರ ಹೆಚ್ಚುವರಿ ಭೂಮಿಯನ್ನು ಎಲ್ಲಾ ಜಾತೀಯ ಭೂಹಿನರಿಗೆ ಹಂಚಿಕೆ ಮಾಡಬೇಕು. ಸರ್ಕಾರದ ಹೆಚ್ಚುವರಿ ಭೂಮಿಯನ್ನು ಕಬಳಿಸಿ ಸಾಗುವಳಿ ಮಾಡಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ, ಅಹೋರಾತ್ರಿ ಅನಿರ್ದಾಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ರೆಡ್ ಸ್ಟಾರ್ ಕಾರ್ಯಕರ್ತರು, ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಹೋರಾಟಗಾರರನ್ನು ಬಿಡಬೇಕು ಎಂದು ಆಗ್ರಹಿಸಿದರು. ನಂತರ ಪೊಲೀಸರು ಹೋರಾಟಗಾರರನ್ನು ಬಿಡುಗಡೆಗೊಳಿಸಿದರು. ತಾತ್ಕಾಲಿಕವಾಗಿ ಧರಣಿನಿರತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನಾ ಉದ್ದೇಶಿಸಿ, ರಾಜ್ಯ ಮುಖಂಡ ಆರ್. ಮಾನಸಯ್ಯ ಮಾತನಾಡಿ, ಜವಳಗೇರಾ ನಾಡಗೌಡರ ಭೂಮಿಯನ್ನು, ಭೂಹೀನರಿಗೆ ಹಂಚಿಕೆ ಮಾಡಬೇಕು. ಬಡ ಜನರು ಭೂಮಿ ಇಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರಿ ಭೂಮಿಯನ್ನು ಕಬಳಿಸಿ ಸಾಗುವಳಿ ಮಾಡಿದವರ ಮೇಲೆ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು . ನಮ್ಮ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಹತ್ತು ದಿನವಾದರೂ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಹೋರಾಟಕ್ಕೆ ಕರೆ ನೀಡಲಾಗುವುದು ಎಂದರು.
ಈ ವೇಳೆ ಸಿಪಿಐ(ಎಂಎಲ್)ರೆಡ್ ಸ್ಟಾರ್ ಪಕ್ಷದ ಎಂ.ಡಿ.ಅಮೀರ ಅಲಿ, ಎಂ.ಗಂಗಾಧರ, ಜಿ.ಅಮರೇಶ, ಮಾಬುಸಾಬ ಬೆಳ್ಳಟ್ಟಿ, ಅಜೀಜ್ ಜಾಗೀರದಾರ, ಕರ್ನಾಟಕ ರೈತ ಸಂಘ-ಎಐಕೆಕೆಎಸ್‌ನ ಕಂದೇಗಾಲ ಶ್ರೀನಿವಾಸ, ಮಲ್ಲಯ್ಯ ಕಟ್ಟಿಮನಿ, ಸಂತೋಷ ಹಿರೇದಿನ್ನಿ, ಹನುಮಂತಪ್ಪ ಗೋಡ್ಯಾಳ, ಮಾರುತಿ ಜಿನ್ನಾಪೂರ, ಯಲ್ಲಪ್ಪ ಉಟಕನೂರು, ಗಿರಿಲಿಂಗಸ್ವಾಮಿ, ಆದೇಶ ನಗನೂರು, ಪ್ರಕಾಶ, ರಾಮಕೃಷ್ಣ, ಶೇಖರಪ್ಪ, ಅಂಬಮ್ಮ ಬಸಾಪೂರ, ಹಂಪಮ್ಮ, ಉಷಾ, ಚೈತ್ರಾ, ರೇಣುಕಮ್ಮ, ಸುಮಂಗಲಾ, ರುಕ್ಮಿಣೇಮ್ಮಾ, ಜುಲೇಖಾಬೇಗಂ,ಸಂಗಮ್ಮಾ,ಭಿಬೀ ಪಾತಿಮಾ ಸೇರಿದಂತೆ ಭೂಹೀನರು ಮೌನೇಶ, ಹಾಗೂ ಇತರೆ ನೂರಾರು ಜನರು, ಭೂ ಸಂಘರ್ಷ ರಸ್ತೆ ತಡೆ ಹೋರಾಟದಲ್ಲಿ ಪಾಲ್ಗೊಂಡಿದ್ದರು.