ಮಕ್ಕಳ ಸಾಂಗತ್ಯದಿಂದಲೇ ನಾವು ಅನೇಕ ವಿಷಯ ಕಲಿಯುತ್ತೇವೆ, ಮಕ್ಕಳೇ ಒಂದು ಚೆಂದದ ಕವಿತೆ ಎಂದು ಕವಯಿತ್ರಿ ರಂಗಮ್ಮ ಹೊದೇಕಲ್ಲು ಹೇಳಿದರು.
ಶಿರಾ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಸರಣಿ ಸಂವಾದ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ನೋಟ ನೀಟಾಗಿರಬೇಕು,ಕಣ್ಣಲ್ಲ. ಎಲ್ಲರೊಳಗೂ ಕವಿತೆ ಇರುತ್ತದೆ ಆದರೆ ಕೆಲವರಷ್ಟೇ ಅಕ್ಷರ ರೂಪ ಕೊಡುತ್ತಾರೆ. ಯಾವ ಮಗುವೂ ಖಾಲಿಯಲ್ಲ, ಅನ್ನಿಸಿದ್ದನ್ನ ಮಕ್ಕಳು ಬರೆಯಬೇಕು ಎಂದರು.

ಗ್ರಾ. ಪಂ ಸದಸ್ಯ ಶಿವು ಕುಮಾರನಾಯ್ಕ ಮಾತನಾಡಿ ವಿದ್ಯೆಗೆ ವಿನಯವೇ ಭೂಷಣ, ನೀವು ಎಲ್ಲರೂ ಸಂಸ್ಕಾರವಂತರಾಗಿ, ಸಾಧಕರ ಯಶೋಗಾಥೆಯನ್ನು ಕೇಳುತ್ತಾ ಪ್ರೇರಣೆಯಾಗಬೇಕು. ಸಾಧನೆಯ ಜಾಡಲ್ಲಿ ಇಂದಿನಿಂದಲೇ ಪಯಣ ಶುರು ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಬರಹಗಾರರಾದ ದಾದಪೀರ್, ರವಿತೇಜ ಚಿಗಳಿಕಟ್ಟೆ, ಶೈಲಜಾ ಮಂಜುನಾಥ್, ಗಾಯಕ ದರ್ಶನ್ ಹಾಗೂ ಶಾಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು. ರಶ್ಮಿ ಎಲ್. ನಿರೂಪಿಸಿ, ವಂದಿಸಿದರು.