ಇಂಡಿ | ಗ್ರಾಮದಲ್ಲಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮ; ಮಹಿಳೆಯರಿಗೆ ತರಬೇತಿ

Date:

Advertisements

ವಿಜಯಪುರದ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿ ಹೇಗೆ ಮಾಡುವುದೆಂದು ಎಂಟರಪ್ರೈನಿಯರ ಶಿಪ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮಹಿಳೆಯರಿಗೆ ತರಬೇತಿ ಹಮ್ಮಿಕೊಂಡಿತ್ತು.

ಮನೆಯಲ್ಲಿ ಇದ್ದುಕೊಂಡು ಬಿಡುವಿನ ಸಮಯದಲ್ಲಿ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆ ಹೇಗೆ ಮಾಡಬಹುದು ಮತ್ತು ಅದನ್ನು ಮಾರುಕಟ್ಟೆಗೆ ಹೇಗೆ ತರುವುದು ಎಂದು ವೆಬಿಸಿನರ್ ಸಂಸ್ಥೆಯ ನಿರ್ದೇಶಕ  ಬಾಬು ಸಂಗ್ರಾಮ ಅವರು ಮಹಿಳೆಯರಿಗೆ ಮಾಹಿತಿ ನೀಡಿದರು.

ಎಚ್‌ಡಿಎಫ್‌ಸಿ ಲೈಫ್ ಇನ್ಸೂರೆನ್ಸ್ನ ಪರಮೇಶ್ವರ್ ಗುಣಕಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಸ್ವಂತ ಉದ್ಯೋಗ ಮಾಡಲು ಮಿನಿಸ್ಟ್ರಿ ಆಫ್ ಮೈಕ್ರೋ ಶೇ. 50ರಷ್ಟು ಡಿಸ್ಕೌಂಟ್ ಕೊಡುತ್ತದೆ. ಸಾಲು ಸಾಲ ಪಡೆಯಲು ಅದರದೇ ಆದ ನಿಯಮವಿದೆ. ಸಾಲ ಸದ್ಬಳಕೆ ಮಾಡಿಕೊಳ್ಳಬೇಕು. ಶೇ.60 ಸಬ್ಸಿಡಿ ಇದೆ. 80 ಪೈಸೆ ಬಡ್ಡಿದರದಲ್ಲಿ ಲೋನ್ ಅನ್ನು ನಾವು ಕೊಡುತ್ತೇವೆ ಎಂದರು.

Advertisements

ಸಂಪನ್ಮೂಲ ವ್ಯಕ್ತಿಯಾಗಿ ಬಸವರಾಜ್ ಅವರು ಆಗಮಿಸಿದ್ದರು, ಈ ತರಬೇತಿಯ ಉಪಯೋಗವನ್ನು ಪಡೆಯಿರಿ ಎಂದು ಒಡಲ ದನಿ ಒಕ್ಕೂಟದ ಸದಸ್ಯರಾದ ಡಾ.ಭುವನೇಶ್ವರಿ ಕಾಂಬಳೆ ಆಶಯ ನುಡಿಗಳನ್ನಾಡಿದರು. ಬೇಬಿಸ್ ಸಂಸ್ಥೆಯ ಸುರೇಖಾ ನಿರೂಪಿಸಿದರು. ಒಡಲ ದನಿ ಒಕ್ಕೂಟದ ಅಧ್ಯಕ್ಷ ಹಿಂದೂ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X