ಬಿಟಿಎಂ ಲೇಔಟ್‌ನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 10 ವರ್ಷದ ಬಾಲಕ ತನಗೆ ಕಿರುಕುಳ ನೀಡಿದ್ದಾನೆ ಎಂದು ಬೆಂಗಳೂರು ಮೂಲದ ಯೂಟ್ಯೂಬರ್ ಒಬ್ಬರು ಆರೋಪಿಸಿದ್ದಾರೆ. ಇದರ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದಾರೆ.
ಯೂಟ್ಯೂಬರ್ ನೇಹಾ ಬಿಸ್ವಾಲ್ ಕೆಲಸದಿಂದ ಹಿಂತಿರುಗುವಾಗ ವಿಡಿಯೋ ಬ್ಲಾಗ್ ಅನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಬೈಸಿಕಲ್‌ನಲ್ಲಿ ಸಾಗುತ್ತಿದ್ದ ಬಾಲಕ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ಎಸಗಿದ್ದಾನೆ.
ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರು ಪೊಲೀಸರು ವಿಡಿಯೋದ ಆಧಾರದಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಿಕೃತ ಕಾಮಿ; ಆಸ್ಪತ್ರೆ ವಾರ್ಡ್ ಬಾಯ್ ಬಂಧನ
ಬಿಟಿಎಂ ಲೇಔಟ್‌ನಲ್ಲಿ ಪಿಜಿಯಲ್ಲಿರುವ ಬಿಸ್ವಾಲ್ ಈ ಘಟನೆಯ ಬಳಿಕ ಆಘಾತಕ್ಕೆ ಒಳಗಾಗಿದ್ದು ಅತ್ತು ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
An Instagram user, @nehabiswal120, has reported facing sexual harassment in BTM Layout, Bengaluru. She claims that while she was walking down the street, a boy on a bicycle approached her, greeted her with a "hi," and then inappropriately touched her before quickly fleeing the… pic.twitter.com/R6qXDnVUc8
— Karnataka Portfolio (@karnatakaportf) November 6, 2024
“ಈ ರೀತಿ ನನಗೆ ಎಂದಿಗೂ ಸಂಭವಿಸಿಲ್ಲ. ನಾನು ನಿಜವಾಗಿಯೂ ತುಂಬಾ ದುಖಃವಾಗಿದೆ. ನಾನು ನಡೆಯುವಾಗ ವಿಡಿಯೋ ಮಾಡುತ್ತಿದ್ದೆ. ಆ ಈ ಹುಡುಗ ಆರಂಭದಲ್ಲಿ ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ. ಬಳಿಕ ಯು-ಟರ್ನ್ ಮಾಡಿ ನನ್ನ ಕಡೆಗೆ ಬಂದು, ನನ್ನ ಗೇಲಿ ಮಾಡಿದ. ಬಳಿಕ ನನಗೆ ಲೈಂಗಿಕ ಕಿರುಕುಳ ನೀಡಿದ” ಎಂದು ಬಿಸ್ವಾಲ್ ಹೇಳಿದ್ದಾರೆ.
“ಮೊದಲು ನನ್ನನ್ನು ಗೇಲಿ ಮಾಡಿದನು. ಬಳಿಕ ಕ್ಯಾಮೆರಾದಲ್ಲಿ ಹೇಗೆ ಮಾತನಾಡುತ್ತಿದ್ದೇನೆ ಎಂದು ಅನುಕರಿಸಿದರು. ಅದಾದ ಬಳಿಕ ನನಗೆ ಕಿರುಕುಳ ನೀಡಿದನು” ಎಂದು ಯುವತಿ ಆರೋಪಿಸಿದ್ದಾರೆ.
ಬಾಲಕನು ಓಡಿಹೋಗಲು ಪ್ರಯತ್ನಿಸಿದ್ದು, ಸಹಾಯಕ್ಕಾಗಿ ಕೂಗಿದ ನಂತರ ಸ್ಥಳೀಯ ಜನರು ಹಿಡಿದಿದ್ದಾರೆ. ಘಟನೆಯ ವಿಡಿಯೋವನ್ನು ತೋರಿಸಿದ ನಂತರವೇ ಜನರು ಆಕೆಯನ್ನು ನಂಬಿದ್ದಾರೆ ಎಂದು ಬಿಸ್ವಾಲ್ ಹೇಳಿದ್ದಾರೆ.
