ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ಬೈಲುಕುಪ್ಪೆ ಠಾಣಾ ವ್ಯಾಪ್ತಿಯ ನವಿಲೂರು ಗ್ರಾಮದಲ್ಲಿ ಕುಡಿತಕ್ಕೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಮಗ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಗೌರಮ್ಮ (60) ಮೃತಪಟ್ಟ ದುರ್ದೈವಿಯಾಗಿದ್ದು. ಸ್ವಾಮಿ (40) ಹತ್ಯೆ ಆರೋಪಿಯಾಗಿದ್ದಾನೆ. ಮೃತ ತಾಯಿಗೆ ಆರೋಗ್ಯ ಸರಿಯಿರದ ಕಾರಣ ಒಂದು ಜೊತೆ ದನ ಮಾರಿ ₹90 ಸಾವಿರ ಹಣವನ್ನು ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಂಡಿದ್ದರು.
ಕುಡುಕ ಮಗ ಸ್ವಾಮಿ ಕುಡಿಯಲು ಹಣ ನೀಡುವಂತೆ ಪ್ರತಿನಿತ್ಯ ಪೀಡಿಸುತಿದ್ದ. ಮಗನ ಕಾಟ ತಾಳಲಾರದೆ ಗೌರಮ್ಮ ಪತಿಯೊಂದಿಗೆ ಜಮೀನಿನಲ್ಲಿರುವ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಗೌರಮ್ಮ ಅವರ ಪತಿ ಅರೋಗ್ಯ ಸರಿ ಇರದೆ ಪಿರಿಯಾಪಟ್ಟಣಕ್ಕೆ ಚಿಕಿತ್ಸೆ ಪಡೆಯಲು ತೆರಳಿದ್ದ ವೇಳೆ ಮನೆಗೆ ಬಂದ ಮಗ ತಾಯಿಯನ್ನು ಹಣ ನೀಡುವಂತೆ ಪಿಡಿಸಿದ್ದಾನೆ. ಹಣ ನೀಡಲು ತಾಯಿ ಒಪ್ಪದಾಗ ಕೈ ಮಾಡಿದ್ದಾನೆ. ಆತನ ಹೊಡೆತಕ್ಕೆ ಗೌರಮ್ಮ ಮೃತಪಟ್ಟಿದ್ದಾರೆ. ಘಟನೆಯ ಮಾಹಿತಿ ತಿಳಿದ ಬೈಲುಕುಪ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲು ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ
ಹತ್ಯೆ ಸ್ಥಳಕ್ಕೆ ಮೈಸೂರು ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಸಬ್ ಇನ್ಸ್ಪೆಕ್ಟರ್ ಗೋವಿಂದರಾಜು, ಬೈಲುಕುಪ್ಪೆ ಪಿ ಎಸ್ ಡಿ. ಆರ್. ರವಿಕುಮಾರ್, ಸಿಬ್ಬಂದಿಗಳಾದ ಮುದ್ದುರಾಜ್, ರುದ್ರೇಶ್, ಕುಮಾರಸ್ವಾಮಿ ಭೇಟಿ ನೀಡಿದ್ದರು.