ಸೊರಬ | ತಳ ಸಮುದಾಯದ ಪರ ಹೋರಾಟ ಮಾಡುವುದು ಅವಿಭಾಜ್ಯ ಅಂಗ : ನಟ ಚೇತನ್ ಅಹಿಂಸ

Date:

Advertisements

ಸೊರಬ, ವ್ಯೆಯಕ್ತಿಕವಾಗಿ ನಮ್ಮ ಪರಿಶ್ರಮ ಹಾಗೂ ಬೆವರು ಸುರಿಸಿ ಉತ್ತಮ ಸ್ಥಾನಕ್ಕೆ ಏರಿದ್ದೇವೆ. ಆದರೆ ಸೈದ್ಧಾಂತಿಕ ನಿಲುವಿನೊಂದಿಗೆ ತಳ ಸಮುದಾಯದ ಪರವಾಗಿ ಹೋರಾಟ ಮಾಡುವುದು ಕೂಡ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಚಲನಚಿತ್ರ ನಟ ಚೇತನ್ ಹೇಳಿದರು.

ಪಟ್ಟಣದಲ್ಲಿ ದಲಿತ ಮುಖಂಡರು,ಸಮಾನ ಮನಸ್ಕರು ಹಾಗೂ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಸಮಾನತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾನತೆ ಎನ್ನುವುದು ಲಿಂಗದ ದೃಷ್ಟಿಯಿಂದ, ಶೈಕ್ಷಣಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಪ್ರಮುಖವಾಗಿದೆ.ಆದರೆ ಪ್ರಭುತ್ವವು ಅಬಲರಿಗೆ ಸಿಗದಂತೆ ನೋಡಿಕೊಂಡಿದೆ. ಈ ವಿಚಾರಧಾರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸುವಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಆಗಿದೆ ಎಂದು ತಿಳಿಸಿದರು.

Advertisements

ಸಮಾಜದಲ್ಲಿ ಬೇಕಿರುವುದು ಸಂಪೂರ್ಣವಾದ ಪರಿವರ್ತನೆ. ಅದು ಅಹಿಂಸವಾದದ ರೀತಿ ಆಗಿರಬೇಕು.ಆ ಕ್ರಾಂತಿಯೇ ಸಮ ಸಮಾಜ.ದಲಿತರ ಶತೃ ಅನ್ಯಾಯದ ವ್ಯವಸ್ಥೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಈ ಹೋರಾಟವನ್ನು ಮುನ್ನಡೆಸಲು ರಾಜ್ಯದ ೬ ಕೋಟಿ ಜನರು ಕೈಜೋಡಿಸಿದಾಗ ಸಮಾನತೆ ಕಾಣಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿ, ಭಾರತ ದೇಶವು ಪ್ರತಿಯೊಬ್ಬ ಪ್ರಜೆಗೆ ಮನೆ ಇದ್ದಂತೆ. ನಾವು ಒಂದೇ ಕುಟುಂಬದ ಸದಸ್ಯರು. ಹೀಗಿರುವಾಗ ದೇಶದಲ್ಲಿನ ಆಸ್ತಿ,ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಉಳ್ಳವರ ಪಾಲಾಗಿರುವ ಬಂಡವಾಳ ಎಲ್ಲರಿಗೂ ಸೇರಬೇಕು ಎಂದರು.

ಗುರುರಾಜ್,ನಾಗಪ್ಪ ಮೇಷ್ಟ್ರು, ಬಸವರಾಜಪ್ಪ, ಮೆಹಬೂಬ್, ರೆಹಮಾನ್ ಸಾಬ್, ಶ್ರೀಕಾಂತ್ ಚಿಕ್ಕಶಕುನ, ರತ್ನಮ್ಮ,ಶೇಖರಮ್ಮ,ರುದ್ರಪ್ಪ,ನಾಗರಾಜ್ ಸೇರಿದಂತೆ ಸಮಾನ ಮನಸ್ಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

Download Eedina App Android / iOS

X