ಕ್ರೀಡೆ ಮಕ್ಕಳ ದೇಹ ದೃಢತೆಗೆ ಸಹಕಾರಿಯಾಗಿದ್ದು, ಪಾಠದ ಜೊತೆಗೆ ಆಟವೂ ಪರಿಣಾಮಕಾರಿಯಾಗಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಜೋಯಲ್ ಜಯರಾಜ್ ನುಡಿದರು.
ಔರಾದ ತಾಲೂಕಿನ ಉಜನಿ ಗ್ರಾಮದ ಪ್ರೇಮಾಂಜಲಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಅಂತರ್ ಶಾಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮಾನಸಿಕ, ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಶಿಕ್ಷಣದಷ್ಟೆ ಆಟಗಳು ಪ್ರಮುಖ ಭಾಗವಾಗಿವೆ. ಈಚೆಗೆ ದಿನಗಳಲ್ಲಿ ದೇಶದ ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಅವರ ಕ್ರಿಯಾಶೀಲತೆಗೆ ಬೇಕಾಗಿರುವ ಅಗತ್ಯ ಸೌಕರ್ಯಗಳು ದೊರೆಯುತ್ತಿರುವುದು ಉತ್ತಮ ಸಂಗತಿ. ಮಕ್ಕಳು ಕ್ರೀಡೆಗಳಲ್ಲಿ ಭಾಗಿಯಾಗಿ ತಮ್ಮಲ್ಲಿ ಅಡಗಿರುವ ಕ್ರೀಡಾಪ್ರತಿಭೆ ಪ್ರದರ್ಶಿಸಬೇಕುʼ ಎಂದರು.
ಶಿಕ್ಷಣ ಸಂಯೋಜಕ ಬಲಭೀಮ ಕುಲಕರ್ಣಿ ಮಾತನಾಡಿ, ‘ಮಕ್ಕಳು ಕ್ರೀಡೆಗಳಲ್ಲಿ ಭಾಗಿಯಾಗುವುದರಿಂದ ದೈಹಿಕ ಸಾಮರ್ಥ್ಯ ಜೊತೆಗೆ ಒಗ್ಗಟ್ಟು, ಸ್ನೇಹ ಬೆಳೆಯುತ್ತದೆ. ಮಾನಸಿಕ, ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ’ ಎಂದರು.
ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್, ಉದ್ದ ಜಿಗಿತ, ಎತ್ತರ ಜಿಗಿತ, ಓಟ, ಗುಂಡು ಎಸೆತ, ಚಕ್ರ ಎಸೆತ, ಚೇಸ್ ಸೇರಿದಂತೆ ಇನ್ನಿತರ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮಠಾಧೀಶರಿಗೆ ಮದುವೆ ಮಾಡಿಸಬೇಕು : ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಸಿಸ್ಟರ್ ಸರೀತಾ, ಸಿಸ್ಟರ್ ಲಿನೇಟ್,ರಾಜಕುಮಾರ್, ಎಂ.ಡಿ. ಗಫರ್, ರವೀಂದ್ರ ರೆಡ್ಡಿ, ಮಾಣಿಕ, ಜಯಕುಮಾರ್, ಅನೀಲ ರೆಡ್ಡಿ, ಸತೀಷ ನಾಗೂರೆ, ಸಿಸ್ಟರ್ ಕವಿತಾ, ಸಿಸ್ಟರ್ ಪ್ರಿಯಾಂಕಾ, ಸರೋಜನಿ, ವೆಂಕಟರಾವ್ ಪಾಟೀಲ್, ಗಣಪತಿ ಕುಂಬಾರ ಹಾಗೂ ಇತರರಿದ್ದರು. ರಫೀದ್ ವಂದಿಸಿದರು, ದೇವಿಕಾ ಖಾನಪೂರೆ ನಿರೂಪಿಸಿದರು.