ಶ್ರೀನಿವಾಸಪುರ ತಾಲೂಕಿನ ಯಲ್ದೂರ್ ಹೋಬಳಿಯ ಲಕ್ಷ್ಮೀ ಸಾಗರ ಗ್ರಾಮ ಪಂಚಾಯಿತಿಯ ಯದರೂರು ಗ್ರಾಮದಲ್ಲಿ ಸುಮಾರು 1044 ಎಕರೆ ಭೂಮಿ ಕೆಐಎಡಿಬಿಗೆ ಭೂಸ್ವಾಧೀನ ಮಾಡಿಕೊಳ್ಳಲು ನೋಟಿಸ್ ನೀಡಲಾಗಿದ್ದು.ನೀಡಿದ್ದು ಸುಮಾರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಭೂ ಸ್ವಾಧೀನಕ್ಕೆ ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ತಾಲೂಕಿನ ಮಾಜಿ ಶಾಸಕ ರಮೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದು, ಬಲವಂತವಾಗಿ ಯಾವ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಬಾರದು ಇದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ರೈತರೇ ಭೂಮಿ ನೀಡಲು ತಯಾರು ಇದ್ದಲ್ಲಿ ಅಂತವರ ಭೂಮಿ ಮಾತ್ರ ಭೂಸ್ವಾಧೀನ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಅನೇಕ ದಲಿತರು, ಕಡುಬಡವ ರೈತರಿದ್ದು ಸರ್ಕಾರಕ್ಕೆ ಭೂಮಿ ನೀಡಿದರೆ ನಿರ್ಗತಿಕರಾಗುವುದು ಖಚಿತ. ಬಲವಂತವಾಗಿ ಒಂದು ಗುಂಟೆ ಜಮೀನನನ್ನೂ ಸ್ವಾಧೀನ ಮಾಡಲು ಬಿಡಲ್ಲ. ಇಷ್ಟಾಗಿಯೂ ಜಮೀನು ಪಡೆಯಲು ಮುಂದಾದರೆ ಭೂಮಿ ಉಳಿಸಲು ದೇವನಹಳ್ಳಿ ರೀತಿ ಹೋರಾಟ ನಡೆಸುತ್ತೇವೆ ಎಂದು ಕ್ಷೇತ್ರದ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಎಚ್ಚರಿಕೆ ನೀಡಿದರು.
ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ಮಾಜಿ ಶಾಸಕ ಕೆ.ರಮೇಶ್ ಕುಮಾರ್, ಭೂಸ್ವಾಧೀನಾಧಿಕಾರಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿದರು. ಈ ಹಿಂದೆ ನಡೆದ ಸಭೆಯಲ್ಲಿ ಭೂಮಿ ಕೊಡುವುದಿಲ್ಲ ಎಂಬುದಾಗಿ ರೈತರು ಬರೆದುಕೊಟ್ಟಿದ್ದಾರೆ. ಈಗಲೂ ಅದೇ ರೀತಿ ಬರೆದುಕೊಟ್ಟಿದ್ದಾರೆ’ ಎಂದರು.
1,044 ಎಕರೆ ಸರ್ವೇ ಭೂಮಿಯನ್ನು ವಶಕ್ಕೆ ಪಡೆಯಲು ತೀರ್ಮಾನಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಭೂಸ್ವಾಧೀನ ಮಾಡಿಕೊಳ್ಳಲು ನೋಟಿಸ್ ಕೂಡ ನೀಡಿದೆ. ನೋಟಿಸ್ ಬಂದಿರುವ ರೈತರನ್ನು ನಾನೂ ಮಾತನಾಡಿಸಿದ್ದೇನೆ. ಭೂಮಿಯನ್ನು ಕೊಡುವುದಾಗಿ ಹೇಳುವ ಯಾವೊಬ್ಬ ರೈತರೂ ಸ್ಥಳಕ್ಕೆ ಬಂದಿಲ್ಲ. ನನ್ನ ಬಳಿ ಬಂದ 79 ರೈತರು ತನಗೆ ಕೇವಲ 3 ಗುಂಟೆ ಇದೆ, 6 ಗುಂಟೆ ಇದೆ, 1 ಎಕರೆ ಜಮೀನು ಇದೆ ಎಂದು ಹೇಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಮ್ಮಭೂಮಿ ವಿಚಾರದಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಎಂದರು.

ದೇವನಹಳ್ಳಿಯ ಭೂಸ್ವಾದೀನದ ಬಗ್ಗೆ ಇಷ್ಟವಿಲ್ಲದೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಭೂಸ್ವಾಧೀನವನ್ನು ಕೈಬಿಟ್ಟಿದ್ದಾರೆ, ಸ್ವಇಚ್ಛೆಯಿಂದ ಕೊಡುವವರು ಕೊಡಲಿ, ಯಾವುದೇ ಕಾರಣಕ್ಕೂ ಬಲವಂತವಾಗಿ ಭೂಮಿಯನ್ನು ವಶಕ್ಕೆ ಪಡೆಯಬಾರದೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸರ್ಕಾರದ ಭೂಮಿ ಇದ್ದರೆ ಸಾವಕಾಶವಾಗಿ ಕೈಗಾರಿಕಾ ವಲಯ ಸ್ಥಾಪಿಸಿ ನಮ್ಮ ಅಭ್ಯಂತರವಿಲ್ಲ. ಬಲವಂತವಾಗಿ ಭೂಮಿಯನ್ನು ಪಡೆದರೆ ಭೂಮಿ ಉಳಿಸಲು ದೇವನಹಳ್ಳಿ ರೀತಿ ಮತ್ತೊಂದು ಹೋರಾಟ ಹಮ್ಮಿಕೊಳ್ಳಲಾಗುವುದು’ ಎಚ್ಚರಿಸಿದರು.
ಶ್ರಿನಿವಾಸಪುರ ತಾಲೂಕಿನ ಹಲವಾರು ಸಂಘಟನೆಗಳು ಭೂಸ್ವಾಧೀನಕ್ಕೆ ವಿರೋಧ ಮಾಡಿದ್ದು, ಮುಂದಿನ ವಾರ ಯದರೂರು ಗ್ರಾಮದಿಂದ ಶ್ರೀನಿವಾಸಪುರ ತಾಲೂಕು ಕಚೇರಿಯ ವರೆಗೂ ಪಾದಯಾತ್ರೆ ಮೂಲಕ ಹೋರಾಟ ಮಾಡಲು ಮುಂದಾಗಿದ್ದಾರೆ ಎಂದು ರೈತ ಮುಖಂಡ ನವೀನ್ ತಿಳಿಸಿದ್ದಾರೆ.

ವಿಶೇಷ ಭೂಸ್ವಾಧೀನ ಅಧಿಕಾರಿ ಎಚ್.ಎಸ್.ವೆಂಕಟಲಕ್ಷ್ಮಿ ಮಾತನಾಡಿ, ‘1,273 ಎಕರ 24 ಗುಂಟೆಗೆ 2024ರಲ್ಲಿಯೇ ಕೆಐಎಡಿಬಿ ಕಡೆಯಿಂದ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಈಗಾಗಲೇ ಶೇ 70 ರಷ್ಟು ವಿಚಾರಣೆ ಮುಗಿದಿದೆ. ಒಟ್ಟು 372 ಖಾತೆ ಸಂಖ್ಯೆಗಳು ಇದ್ದು, 150 ಸರ್ವೇ ನಂಬರ್ ಉಳಿದಿವೆ. ಈ ಹಿಂದೆ ಗೈರುಹಾ ಜರಾದವರಿಗೆ ಶುಕ್ರವಾರ ಅವಕಾಶ ನೀಡಿ ವಿಚಾರಣೆಗೆ ಬಂದಿದ್ದೇವೆ’ ಎಂದರು.
ಇದನ್ನು ಓದಿದ್ದೀರಾ? ಹೊಸಪೇಟೆ | ವಿದ್ಯಾರ್ಥಿನಿಯರ ಮೇಲೆ ನಿರಂತರ ದೌರ್ಜನ್ಯ: ಎಸ್‌ಎಫ್‌ಐಯಿಂದ ಪ್ರತಿಭಟನಾ ಧರಣಿ
ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಮಂಜುನಾಥ್, ಮುಖಂಡರಾದ ಬ್ಯಾಟಪ್ಪ, ಯಲ್ಲೂರು ಗೌರಮ್ಮ ಸುಧಾಕರ್, ಪಾತಕೋಟಿ ನವೀನ್ ಕುಮಾರ್, ಸುರೇಶ್‌ಗೌಡ, ಕೊಳತೂರು ಶ್ರೀನಿವಾಸ್, ಕೋಡಿಪಲ್ಲಿ ವಿಶ್ವ, ಅಡಿಚಂಬಕೂರು ಗೋಪಾಲ್, ಯದರೂರು ಕೃಷ್ಣಪ್ಪ, ಲಕ್ಷ್ಮೀಸಾಗರ ವಿನೋದ್ ಇದ್ದರು.
