ವ್ಯಕ್ತಿ ಸತ್ತ ನಾಲ್ಕು ದಿನಗಳ ನಂತರ ನಾವು ಮರೆಯುತ್ತೇವೆ. ಈ ಕಾಲದಲ್ಲಿ ಮೂರು ವರ್ಷಗಳ ನಂತರವೂ ಪುನೀತ್ ರಾಜ್‍ಕುಮಾರ್ ಅವರನ್ನು ನೆನೆಯುತಿದ್ದೇವೆ. ಅವರು ಮಾಡಿರುವ ಕೆಲಸ, ಅವರನ್ನು ಮರೆಯದಂತೆ ನೆನಪಿನಲ್ಲಿ ಇಟ್ಟಿದೆ. ನಾವು ಕೂಡ ಅವರಂತೆ ಒಳ್ಳೆಯ ಕೆಲಸ ಮಾಡಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ ತಿಳಿಸಿದರು.
ಅವರು ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಪುನೀತ್ ರಾಜಕುಮಾರ್ ಮೂರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ಪೆನ್ನು ಪೆನ್ಸಿಲ್ ಸಿಹಿ ತಿನಿಸು ನೀಡಲಾಯಿತು.
ಶ್ರೀರಂಗಪಟ್ಟಣದ ಎಸ್‌ಬಿಐ ಬ್ಯಾಂಕಿನ ಮುಂಭಾಗದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಪುನೀತ್ ರಾಜಕುಮಾರ್ 3ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪುನೀತ್ ರಾಜಕುಮಾರ್ ಒಳ್ಳೆಯ ಕೆಲಸಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಸ್ಮರಿಸಿದರು.

ದರಸಗುಪ್ಪೆ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯರಾದ ಪುಷ್ಪಾ, ಗಿರಿಜಾ, ದರಸಗುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರಾದ ಕೃಷ್ಣಪ್ಪಗೌಡ ಮೋಹನ್ ಕುಮಾರ್, (ಮುರಳಿ) ಮಾಜಿ ಅಧ್ಯಕ್ಷರಾದ ಕಡತನಾಳು ಮಾದೇಶ್, ಮಾಜಿ ಉಪಾಧ್ಯಕ್ಷರಾದ ದರಸಗುಪ್ಪೆ, ಶ್ರೀಧರ್, ಕಡತನಾಳು ಶಿವಕುಮಾರ್, ರಾಂಪುರ ವಿಜೇಂದ್ರ (ಪುಟ್ಟು), ರಾಂಪುರ ಸುರೇಶ್ ಹಾಗೂ ಶಾಲೆಯ ಮಕ್ಕಳು ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಕೊಲೆ ಪ್ರಕರಣದಲ್ಲಿ ಜಾಮೀನು | ನಟ ದರ್ಶನ್ ಜೈಲಿನಿಂದ ಬಿಡುಗಡೆ
ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರಾಮಕೃಷ್ಣ, ಪತ್ರಕರ್ತ ಪರಿಸರ ಪ್ರೇಮಿಯಾದ ರಮೇಶ್, ಸ್ನೇಹಜೀವಿ ಸುಧಾಕರ್, ಬಿಜೆಪಿ ಹೇಮಂತ್ ಕುಮಾರ್, ಇನ್ನಿತರರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀರಂಗಪಟ್ಟಣದ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಮುಖ್ಯಸ್ಥ ಗೋಬಿ ಹರೀಶ್ ನೇತೃತ್ವ ವಹಿಸಿದರು, ಸ್ಟುಡಿಯೋ ಭೀಮಣ್ಣ, ಮನು, ರಾಘು, ಸೂರಿ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
