ವಿಶ್ವಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಮುನ್ನಡೆಯಬೇಕಿದೆ. ಅವರು ತೋರಿಸಿಕೊಟ್ಟ ಹೋರಾಟದ ದಾರಿಯಲ್ಲಿ ಸಮಾಜತೆಗಾಗಿ ಹೋರಾಟ ನಡೆಸಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣ್ಯ ತಿಳಿಸಿದರು.
ನ.19ರಂದು ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಗ್ರಾಮದ ಅಂಬೇಡ್ಕರ್ ಭವನದ ವಿಶ್ವಜ್ಞಾನಿ ಜಾನಕೇಂದ್ರಕ್ಕೆ ಭೇಟಿ ನೀಡಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
“ನಾ ಕಂಡಂತೆ ಇದೆ ಮೊದಲ ಭವನ. ಇಷ್ಟು ಚೆನ್ನಾಗಿ ಇಟ್ಟುಕೊಂಡಿರುವುದು. ಕಟ್ಟಿರುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು. ಅಂದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುತ್ತಿರುವುದು ಸಾರ್ಥಕವಾಗಿದೆ” ಎಂದರು.

ವೆಂಕಟೇಗೌಡ ಸೇವಾ ಸಮಿತಿಯ ಡಾ. ಕೆ ವೈ ಶ್ರೀನಿವಾಸ್ ಮಾತನಾಡಿ, ನಾವು ಕೇಳಿದ ತಕ್ಷಣ ಶಾಸಕರು ಅಂಬೇಡ್ಕರ್ ಪುತ್ಥಳಿಗೆ 2೦ ಸಾವಿರ ಧನ ಸಹಾಯ ಮಾಡಿದ್ದಾರೆ. ಅವರಿಗೆ ಪುಸ್ತಕ, ಗ್ರಂಥಾಲಯ ಹಾಗೂ ಶಾಲೆಗಳು ಅಂದರೆ ಬಹಳ ಇಷ್ಟ. ಅದಕ್ಕೆ ಅವರು ಪುಸ್ತಕಗಳನ್ನು ವಿಶ್ವಜ್ಞಾನಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕ್ಯಾತನಹಳ್ಳಿಯಲ್ಲಿ ಬಹಳ ಅದ್ಭುತವಾದ ಶಾಲೆಯನ್ನು ಕಟ್ಟಿಸುತ್ತಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಎಲ್ಲರ ಬೆಂಬಲ ಅವಶ್ಯ : ಸಚಿವ ಚಲುವರಾಯಸ್ವಾಮಿ
ಈ ಸಂದರ್ಭದಲ್ಲಿ ಅವರು ವಿಶ್ವಜ್ಞಾನಿ ಜ್ಞಾನ ಕೇಂದ್ರಕ್ಕೆ ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನ ಕೊಡುಗೆಗಳಾಗಿ ನೀಡಿದರು. ವಿಶ್ವಜ್ಞಾನಿ ಅಂಬೇಡ್ಕರ್ ಸಂಘದಿಂದ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯರಿಗೆ ವಿಶ್ವಜ್ಞಾನಿ ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿವಣ್ಣ ಲಾಲಿಪಾಳ್ಯ, ಉಪ ಕಾರ್ಯದರ್ಶಿ ವಸತಿ ನಿಗಮ, ಡಾ. ಕೆ ವೈ ಶ್ರೀನಿವಾಸ್ ವೆಂಕಟೇಗೌಡ ಸೇವಾ ಸಮಿತಿ, ವಿಶ್ವಜ್ಞಾನಿ ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್, ದರಸಗುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಕೆ ಸುಜಯ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಜಯಶಂಕರ್ ಕೆ ಎಸ್, ಯಜಮಾನರಾದ ಸ್ವಾಮಿ, ಶಿವಣ್ಣ ಕೆ, ಸೂರ್ಯಕುಮಾರ್, ಸಂತೋಷ್ ಕುಮಾರ್, ಜಗದೀಶ್, ವಿಠಲ, ಭಾಗ್ಯಮ್ಮ ಇನ್ನೂ ಮುಂತಾದವರು ಭಾಗಿಯಾಗಿದ್ದರು.
