ʼಮುಸ್ಲಿಂ ಸಮುದಾಯವನ್ನು ಬೇರು ಸಮೇತ ಕಿತ್ತೊಗೆಯಬೇಕು, ಲವ್ ಜಿಹಾದ್ ಆರೋಪಿಗಳನ್ನು ಮಟ್ಟ ಹಾಕಬೇಕುʼ ಎಂದು ಕಲಬುರಗಿಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಫೇಸ್‌ಬುಕ್ ವಿಡಿಯೊ ಹೇಳಿಕೆ ವೈರಲ್ ಆಗಿರುವ ಬೆನ್ನಲ್ಲೇ ಮಣಿಕಂಠ ರಾಠೋಡ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಮಣಿಕಂಠ ರಾಠೋಡ ಅವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸಬೇಕು ಮತ್ತು ಮುಸ್ಲಿಂ ಜನಾಂಗದ ರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಶಹಾಬಾದ್ ಮುಸ್ಲಿಂ ಫೋರಂನ ಮಹಮ್ಮದ್ ಮಸ್ತಾನ್ ಅವರು ನಗರ ಪೋಲಿಸ್ ಠಾಣೆಯ ಪಿಐ ನಟರಾಜ ಲಾಡೆ ಅವರಿಗೆ ಮನವಿ ಪತ್ರ ಹಾಗೂ ದೂರು ನೀಡಿದರು. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಹಾಬಾದ್ ತಾಲ್ಲೂಕಿನ ಮುಸ್ಲಿಂ ಫೋರಂನ ಅಬ್ದುಲ್ ಘನಿ ಸಾಬೀರ್, ಜಹೀರ್ ಅಹ್ಮದ್ ಪಟವೇಗಾರ, ಮಹ್ಮದ್ ಇಮ್ರಾನ್, ಅಜರ್ ಜುನೈದಿ, ಲಾಲ್ ಅಹ್ಮದ್, ಅಜೀಮ ಸಾಹೇಬ್, ಅಮ್ಜಾದ್ ಜಮಾದಾರ, ಮಹ್ಮದ್ ಜಾಕೀರ್, ಜಾವೀದ್ ಸೇರಿದಂತೆ ಮತ್ತಿತರರಿದ್ದರು.
ಇದನ್ನೂ ಓದಿ : ಕಲಬುರಗಿ | ವಿವಿಧ ಬೇಡಿಕೆ ಈಡೇರಿಕೆಗೆ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಿಂದನೆ ಮಾಡಿರುವ ಆರೋಪದ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.