ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಖ್ಯ ದ್ವಾರದ ಆವರಣದಲ್ಲಿ ನಗರ ಸಭಾ ಅಧ್ಯಕ್ಷ ಗಣೇಶ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಪ್ರವೇಶ ಮಾಡದಂತೆ, ವ್ಯಾಪಾರ ಮಾಡದಂತೆ ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದ್ದಾರೆ.
ಬಸ್ಸುಗಳು ಬಂದಾಗ ಕಡಲೇಕಾಯಿ, ಸೌತೆಕಾಯಿ, ಸೀಬೇಕಾಯಿ ಇತ್ಯಾದಿ ಮಾರಾಟ ಮಾಡುವ ಸರಿ ಸುಮಾರು 35 ಮಂದಿ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ಬಸ್ ಸ್ಟ್ಯಾಂಡ್ ಆವರಣದಲ್ಲಿ, ಬಸ್ಸುಗಳಿಗೆ ಹತ್ತಿ ವ್ಯಾಪಾರ ಮಾಡದಂತೆ ನಿರ್ಬಂದಿಸಿದ್ದಾರೆ.
ಇದರಿಂದ ಮನನೊಂದ ವ್ಯಾಪಾರಿಗಳು ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆಗೆ ಇಳಿದಿದ್ದಾರೆ. ನಗರ ಸಭೆ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಬೆಂಬಲ ಸೂಚಿಸಿ ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯವಾಗಿದ್ದು. ಬಡ ಕುಟುಂಬಗಳ ಜೀವನ ನಿರ್ವಹಣೆಗೆ ಕಂಟಕಪ್ರಾಯರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಧರಣಿ ನಿರತರು ಬೀದಿ ಬದಿ ವ್ಯಾಪಾರಿಗಳಿಗೆ ಬಸ್ ನಿಲ್ದಾಣ ಆವರಣದಲ್ಲಿ ಪ್ರವೇಶ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹ ಪಡಿಸಿದರು. ಬೀದಿ ಬದಿ ವ್ಯಾಪಾರಿಗಳ ಜೀವನ ನಿರ್ವಹಣೆಗೆ ಅಡ್ಡಿಪಡಿಸಿರುವುದನ್ನು ಖಂಡಿಸಿದರು. ಚಿಕ್ಕ ಪುಟ್ಟ ವ್ಯಾಪಾರಸ್ತರ ಹತ್ತಿಕ್ಕುವುದು ಸೂಕ್ತವಲ್ಲ. ಬಡವರ ಮೇಲೆ ಕಾನೂನು ಪ್ರಯೋಗ ಬೇಡ ಎಂದು ಕಿಡಿಕಾರಿದ್ದಾರೆ.
ನಗರಸಭೆ ಅಧ್ಯಕ್ಷ ಗಣೇಶ್ ಕುಮಾರ ಸ್ವಾಮಿ ಮಾತನಾಡಿ ” ಬೀದಿ ಬದಿ ವ್ಯಾಪಾರಿಗಳಿಗೆ ಬಸ್ ಸ್ಟ್ಯಾಂಡ್ ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು, ಬಡ ಕುಟುಂಬಗಳ ನಿತ್ಯ ಜೀವನ ನಿರ್ವಹಣೆಗೆ ಕುತ್ತು ಬರಕೂಡದು. ದೈನಂದಿನ ಜೀವನಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡುವವರ ಮೇಲೆ ದರ್ಪ ತೋರುವುದು, ಹತ್ತಿಕ್ಕುವುದು ಸೂಕ್ತವಲ್ಲ. ಕೆಎಸ್ಆರ್ಟಿಸಿ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದರೆ ಪೊಲೀಸರಿಗೆ ದೂರು ನೀಡಿ ಬಸ್ ತಡೆ ಮಾಡುವುದಾಗಿ ” ಎಚ್ಚರಿಸಿದರು.
ಮಳೆಯನ್ನು ಲೆಕ್ಕಿಸದೆ ಧರಣಿ ಕುಳಿತ ಪ್ರತಿಭಟನಾಕಾರರಿಗೆ ಅಧಿಕಾರಗಳು ಮುಂದಿನ ಸೋಮವಾರ ಕೆಎಸ್ಆರ್ಟಿಸಿ ಮುಖ್ಯ ಅಧಿಕಾರಿಗಳ ಜೊತೆ ಚರ್ಚಿಸಿ, ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಮಾಹಿತಿ ನೀಡಿ ಅಂತಿಮ ತೀರ್ಮಾನ ಕೈಗೊಳ್ಳುವರು. ಅಲ್ಲಿಯತನಕ ಬೀದಿ ಬದಿ ವ್ಯಾಪಾರಿಗಳಿಗೆ ಬಸ್ ಸ್ಟ್ಯಾಂಡ್ ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದೆಂದು ಹುಣಸೂರು ಅಧಿಕಾರಿಗಳು ಒಪ್ಪಿಗೆ ನೀಡಿದ್ದರಿಂದ ಧರಣಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿರುವುದಾಗಿ ಮಾಹಿತಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬಾಲ್ಯ ವಿವಾಹ ತಡೆಗೆ ಪರಿಣಾಮಕಾರಿ ಚಟುವಟಿಕೆಗಳನ್ನು ಕೈಗೊಳ್ಳಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್
ನಗರಸಭಾ ಸದಸ್ಯರಾದ ದೇವರಾಜು, ರಮೇಶ್, ಸತೀಶ್ ಯೂನಸ್, ಹರೀಶ್ ಕುಮಾರ್, ಶ್ರೀನಾಥ್, ಕೃಷ್ಣನಾಯಕ್, ದೇವರಾಜ್ ನಾಯಕ್ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.