ಲೋಕಸಭಾ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಶುಕ್ರವಾರ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆಯ ಮೊದಲ ದಿನ ಅಂಧ ಅಭ್ಯರ್ಥಿ ದಿಲೀಪ್ ನಾಗಪ್ಪ ಬೂಸಾ ಎಂಬುವರು ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.
ಬೀದರ್ ತಾಲೂಕಿನ ಕಾಡವಾದ ಗ್ರಾಮದವರಾದ ದಿಲೀಪ್ ನಾಗಪ್ಪಾ ಅವರು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿಗಳು ಆದ ಗೋವಿಂದ ರೆಡ್ಡಿ ಅವರಿಗೆ ನಾಮಪತ್ರ ಪ್ರತಿ ಸಲ್ಲಿಸಿ, ಬ್ರೈಲ್ ಲಿಪಿ ಸಹಾಯದಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು ವಿಶೇಷವಾಗಿತ್ತು. ಬೀದರ್ ನಗರದ ಕುಂಬಾರವಾಡ ಕಾಲೋನಿಯ ವಿನಯ ರಾಜೇಂದ್ರ ಎಂಬುವರು ಯುನಿವರ್ಸ್ ಸಿಟಿಜನ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಮೊದಲ ದಿನ ಏ.12 ರಂದು ನಾಮಪತ್ರಗಳ ಸಲ್ಲಿಸಲು ಮಧ್ಯಾಹ್ನ 3 ಗಂಟೆಗಳ ವರೆಗೆ ಕಾಲಾವಕಾಶವಿತ್ತು. ಇಲ್ಲಿಯವರೆಗೆ ಎರಡು ನಾಮಪತ್ರಗಳು ಮಾತ್ರ ಮೊದಲ ದಿನ ಸಲ್ಲಿಕೆಯಾಗಿವೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಎದೆಯ ಮೇಲೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಟ್ಯಾಟೂ
ಏ.17 ರಂದು ಕಾಂಗ್ರೆಸ್ ಹಾಗೂ ಏ.18 ರಂದು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ಮೂಲಕ ನಾಮಪತ್ರ ಸಲ್ಲಿಕೆಗೆ ನಿರ್ಧರಿಸಿವೆ.