ಧರ್ಮಸ್ಥಳ ಪ್ರಕರಣ | ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಬಂಧನಕ್ಕೆ ಸುಜಾತಾ ಭಟ್ ಪರ ವಕೀಲರ ಆಗ್ರಹ

Date:

Advertisements

ಧರ್ಮಸ್ಥಳದಲ್ಲಿ ಸರಣಿ ಕೊಲೆಗಳು, ಅತ್ಯಾಚಾರ ಕೃತ್ಯಗಳನ್ನು ನಡೆಸಿ ಹಲವು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರನ್ನು ಬಂಧಿಸಬೇಕು ಎಂದು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್‌ ಎನ್ ಅವರು ಆಗ್ರಹಿಸಿದ್ದಾರೆ.

ಎಲ್ಲ ಶವಗಳನ್ನು ಸೂಕ್ತ ದಾಖಲಾತಿಯೊಂದಿಗೆ ಅಧಿಕೃತ ಮಾರ್ಗಗಳ ಮೂಲಕ ಹೂಳಲಾಗಿತ್ತು ಎಂದು ಹೇಳಿಕೆ ನೀಡಿದ್ದ ಶ್ರೀನಿವಾಸ ರಾವ್ ಅವರನ್ನು ಬಂಧಿಸಬೇಕು. ಅವರ ಹೇಳಿಕೆಯ ಹಿಂದೆ ಹಲವು ಅನುಮಾನಗಳಿವೆ. ಈ ಪ್ರಕರಣದಲ್ಲಿ ನಡೆದ ಬೆಳವಣಿಗೆಗಳು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಅವರ ಪೊಳ್ಳು ಹೇಳಿಕೆಗಳನ್ನು ಬಹಿರಂಗಪಡಿಸಿವೆ ಎಂದು ವಕೀಲ ಮಂಜುನಾಥ್ ಅವರು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | 13 ಸ್ಥಳಗಳನ್ನು ಗುರುತಿಸಿದ ದೂರುದಾರ: ಮಹಜರು ನಾಳೆಗೆ ಮುಂದೂಡಿಕೆ

Advertisements

“ದೂರುದಾರರು ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ನೇತ್ರಾವತಿ ನದಿಯ ಬಳಿ ಅಪಾಯಕಾರಿ ಸ್ಥಳಗಳಲ್ಲಿ ಬಹು ಸಮಾಧಿ ಸ್ಥಳಗಳಿಗೆ ಕರೆದೊಯ್ದರು. ಇದು ಎಷ್ಟು ಅಪಾಯಕಾರಿ ಭೂಪ್ರದೇಶ ಎಂದರೆ ದೇಶದಲ್ಲಿ ಎಲ್ಲಿಯೂ ಯಾವುದೇ ಪಂಚಾಯತ್ ಅಧಿಕೃತ ಅಂತ್ಯಕ್ರಿಯೆಗಳಿಗಾಗಿ ಅಂತಹ ಸ್ಥಳಗಳನ್ನು ಆಯ್ಕೆ ಮಾಡುವುದಿಲ್ಲ. ಎಸ್‌ಐಟಿ ಗುರುತಿಸಿರುವ ಈ ಸ್ಥಳಗಳು 1980 ರ ದಶಕದಿಂದ ವ್ಯವಸ್ಥಿತ, ದಾಖಲಿತ ಹೂಳುವಿಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ನೀಡಿದ ಹೇಳಿಕೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಸುಜಾತಾ ಭಟ್ ಪರ ವಕೀಲರು ಹೇಳಿದ್ದಾರೆ.

ಸಂಬಂಧಿಕರು ಸಿಕ್ಕಾಗ ಶವಗಳನ್ನು ಹೊರತೆಗೆಯಲು ಅಲ್ಲಿ ಹೂಳಲಾಗಿತ್ತು ಎಂದು ರಾವ್ ಹೇಳಿಕೊಂಡಿದ್ದರು. ಆದರೆ ಸೋಮವಾರ ಗುರುತಿಸಲಾದ ಸ್ಥಳಗಳು ಅಪಾಯಕಾರಿಯಾಗಿದ್ದು ಅಲ್ಲಿಗೆ ತೆರಳುವುದೂ ಕಷ್ಟವಾಗಿದೆ. ಹಾಗಿರುವಾಗ ಯಾವುದೇ ವಿವೇಕಯುತ ಪಂಚಾಯತ್ ಆಡಳಿತವು ಈ ಸ್ಥಳವನ್ನು ಮೃತದೇಹ ಹೂಳಲು ಈ ಸ್ಥಳಗಳನ್ನು ನೀಡುವುದಿಲ್ಲ. ಈ ಸ್ಥಳಗಳು ಯಾವುದೇ ಗೊತ್ತುಪಡಿಸಿದ ಬಯಲು ಮತ್ತು ಸುಲಭವಾಗಿ ತಲುಪಬಹುದಾದ ಸ್ಥಳದಲ್ಲಿಲ್ಲ. ಅಪಾಯಕಾರಿ ಅರಣ್ಯದಂತಹ ಪ್ರದೇಶಗಳಲ್ಲಿದೆ. ಇದು ಅಧಿಕೃತ ಪಂಚಾಯತ್ ಕಾರ್ಯವಿಧಾನಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವುದಿಲ್ಲ. ಪಂಚಾಯತ್ ದುಃಖಿತ ಕುಟುಂಬಗಳನ್ನು ಈ ಅಪಾಯಕಾರಿ ಸ್ಥಳಗಳಿಗೆ ಸುರಕ್ಷಿತವಾಗಿ ಹೇಗೆ ಕರೆದೊಯ್ಯಬಲ್ಲದು” ಎಂದು ಪ್ರಶ್ನಿಸಿದ್ದಾರೆ.

“ಮಾಹಿತಿ ಬಹಿರಂಗಪಡಿಸಿದವರು ಎಸ್‌ಐಟಿಗೆ ಹಲವು ಗುಪ್ತ ಸ್ಥಳಗಳನ್ನು ತೋರಿಸಲು ಗಂಟೆಗಟ್ಟಲೆ ತೆಗೆದುಕೊಂಡರು. ಒಂದೇ ಒಂದು ಸಮಾಧಿ ಸ್ಥಳವೂ ಅಧಿಕೃತ ಕಾರ್ಯವಿಧಾನಗಳ ಪ್ರಕಾರ ಇಲ್ಲ. ಆದ್ದರಿಂದಾಗಿ ಶ್ರೀನಿವಾಸ್ ರಾವ್ ಅವರ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟಿದೆ” ಎಂದು ವಕೀಲರು ಹೇಳಿದ್ದಾರೆ.

“ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್ ರಾವ್ ಅವರನ್ನು ತಕ್ಷಣ ಬಂಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಸಾರ್ವಜನಿಕರನ್ನು ದಾರಿ ತಪ್ಪಿಸಲು ಮತ್ತು ಕೊಲೆ ತನಿಖೆಗೆ ಅಡ್ಡಿಪಡಿಸಲು ಸಕ್ರಿಯವಾಗಿ ಪ್ರಯತ್ನಿಸಿದ ವ್ಯಕ್ತಿಯಾದ, ಈ ಕೊಲೆಗಳ ಹಿಂದಿರುವ ನಿಜವಾದ ಅಪರಾಧಿಗಳನ್ನು ಮುಚ್ಚಿಡುವುದರ ಹಿಂದಿರುವ ವ್ಯಕ್ತಿಗಳು, ಪಂಚಾಯತ್ ಅಧಿಕಾರಿಗಳು ಮತ್ತು ಜವಾಬ್ದಾರಿಯುತ ವ್ಯಕ್ತಿಗಳ ನಡುವಿನ ಸಂಬಂಧದ ಬಗ್ಗೆ ರಾವ್ ಅವರಿಗೆ ನಿರ್ಣಾಯಕ ಮಾಹಿತಿ ಇರಬಹುದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X