ಉಡುಪಿ | ರಾಜ್ಯ ಬಜೆಟ್, ಅಸಂಘಟಿತ ಕಾರ್ಮಿಕರ ಭದ್ರತೆ ನಿರ್ಲಕ್ಷ್ಯ – ಸುರೇಶ್ ಕಲ್ಲಾಗರ

Date:

Advertisements

ರಾಜ್ಯ ಕರ್ನಾಟಕ ಸರ್ಕಾರ ಇಂದು ಮಂಡಿಸಿದ ಬಜೆಟ್ ನಲ್ಲಿ ಅಸಂಘಟಿತ ಕಾರ್ಮಿಕರ ಭದ್ರತೆಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.

ದೇಶದ ಒಟ್ಟು ಕಾರ್ಮಿಕರಲ್ಲಿ 90% ಅಸಂಘಟಿತ ಕಾರ್ಮಿಕರಿದ್ದಾರೆ. ದೇಶದ ಜಿಡಿಪಿಗೆ ಅವರ ಕಾಣಿಕೆ ಶೇ 56% ಈ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ. ಇನ್ನೊಂದಡೆ ಕರ್ನಾಟಕ ರಾಜ್ಯದಲ್ಲಿ ಸುಮಾರು 1.5 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಅದರಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಸಾರಿಗೆ ಹಾಗೂ ಸಂಬಂಧಿತ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ಸೌಲಭ್ಯಗಳು ಇವೆ. ಅವರನ್ನು ಹೊರತುಪಡಿಸಿದರೆ ಹಮಾಲಿ, ಟೇಲರ್ಸ, ಹೋಟೆಲ್, ಬೀದಿಬದಿ, ಪತ್ರಿಕಾ ವಿತರಕರು, ಸಿನಿಮಾ, ಮನೆಗೆಲಸದ ಮಹಿಳೆಯರು, ಅಕ್ಕಸಾಲಿಗರು, ಚಿಂದಿ ಆಯುವವರು, ನೇಕಾರರು, ಅಲೆಮಾರಿ, ಕ್ಷೌರಿಕರು, ದೋಬಿಗಳು , ಕುಂಬಾರರು, ಬೀಡಿ, ಪೋಟೋಗ್ರಾಫರಗಳು, ಶ್ಯಾಮಿಯಾನ ಕಾರ್ಮಿಕರು ಹೀಗೆ 26 ವಲಯಗಳಲ್ಲಿ ಸುಮಾರು 01 ಕೋಟಿಯಷ್ಟು ವಿವಿಧ ಅಸಂಘಟಿತ ಕಾರ್ಮಿಕರಿದ್ದಾರೆ.
ಈ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಯಲ್ಲಿ ಅಫಘಾತ ಮರಣ, ಅಂಗವಿಕಲತೆ, ಚಿಕಿತ್ಸೆ ಸೌಲಭ್ಯಗಳನ್ನು ಇತ್ತೀಚಿಗೆ ಜಾರಿಮಾಡಲಾಗಿದೆ.

ಬಹುತೇಕ ದಲಿತ ಅಲ್ಪಸಂಖ್ಯಾತ, ಹಿಂದುಳಿದ ವಿಭಾಗಳಿಗೆ ಸೇರಿದ ಅಸಂಘಟಿರು ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕರಾಗಿ ಹಿಂದುಳಿದಿರುವ ಹಾಗೂ ನಿರತರ ಆದಾಯ ಉದ್ಯೋಗ ಭದ್ರತೆ ಹಾಗೂ ಕೆಲಸದ ಸ್ಥಳದಲ್ಲಿ ಸುರಕ್ಷತೆ ಇಲ್ಲದೆ ಸಂಕಷ್ಟದಲ್ಲಿರುವ ಸಮುದಾಯಗಳು.

Advertisements

ಈ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಪ್ರಮುಖ ಬೇಡಿಕೆ ಬದುಕಿರುವಾಗ ಸಹಾಯವಾಗಬಲ್ಲ ಭವಿಷ್ಯನಿಧಿ ಯೋಜನೆ, ಪಿಂಚಣಿ, ವಸತಿ ಹಾಗೂ ಮಕ್ಕಳ‌ ಶಿಕ್ಷಣ, ಆರೋಗ್ಯದ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಬೇಕು ಅದಕ್ಕಾಗಿ ಪ್ರಸಕ್ತ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ರೂ. 500 ಕೋಟಿ ನೀಡಬೇಕು. ನಿರಂತರವಾಗಿ ಕಲ್ಯಾಣ ಸೌಲಭ್ಯಗಳನ್ಜು ಜಾರಿಮಾಡಲು ಅಗತ್ಯ ಹಣಕಾಸು ಸಂಪನ್ಮೂಲ ಕ್ರೂಢಿಕರಿಸಲು ಸೆಸ್ ಸಂಗ್ರಹ ಮಾಡಬೇಕೆಂಬುದು ಬೇಡಿಕೆಯಾಗಿತ್ತು. ನಾವು ಮುಖ್ಯ ಮಂತ್ರಿಗಳಗೆ, ಕಾರ್ಮಿಕ ಸಚಿವರಿಗೆ ನಿರಂತರ ಒತ್ತಾಯ ಮಾಡಿದಾಗಿಯೂ ಮುಖ್ಯ ಮಂತ್ರಿಗಳು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಜೆ ನೇರವು ನೀಡುತ್ತಾರೆ ಎಂಬ ನೀರೀಕ್ಷೆ ಹುಸಿಯಾಗಿದೆ.

ಇದನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಪ್ರಸ್ತುತ ಬಕೆಟ್ ನಲ್ಲಿ ಅಗತ್ಯ ಹಣಕಾಸು ನೇರವು ನೀಡಿ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಮಾಡಲು ಸರಕಾರ‌ ಮುಂದಾಗಬೇಕೆಂದು ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಡವನ್ನು ಸರಕಾರ ಎದುರಿಸಬೇಕಾಗುತ್ತದೆ ಎಂದು ಅಸಂಘಟಿತ ಕಾರ್ಮಿಕರ ಸಂಘಟನೆಗಳ ಒಕ್ಕೂಟ ಸರಕಾರವನ್ನು ಎಚ್ಚರಿಸುತ್ತದೆ ಎಂದು ಹೇಳಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X