ಬಸವನ ಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ನವೆಂಬರ್ ತಿಂಗಳಲ್ಲಿ ಹಮ್ಮಿಕೊಂಡಿರುವ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ದಲಿತ ಸಾಹಿತಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ಗೆ ಮನವಿ ಸಲ್ಲಿಸಲಾಯಿತು.
ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಅಧ್ಯಕ್ಷ ಮುತ್ತುರಾಜ್ ಬಾಗೇವಾಡಿಯವರ ನೇತೃತ್ವದ ನಿಯೋಗವು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಸರ್ವರ ಬದುಕನ್ನು ಹಸನಾಗಿಸಿದ ಬಸವೇಶ್ವರ ಜನ್ಮ ಭೂಮಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಜರುಗುತ್ತಿದೆ. ಹಿಂದಿನ ಒಂಭತ್ತು ತಾಲೂಕು ಸಮ್ಮೇಳನದಲ್ಲಿ ವಿವಿಧ ಜನಾಂಗಕ್ಕೆ ಸೇರಿದ ಸಾಹಿತಿಗಳನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ತಾಲೂಕು ಸಮ್ಮೇಳನದಲ್ಲಿ ಒಮ್ಮೆಯೂ ದಲಿತ ಸಾಹಿತಿಯನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಲ್ಲ. ಈ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿಯಾದರೂ ದಲಿತ ಸಾಹಿತಿಯನ್ನು ಪರಿಗಣಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಬಸವೇಶ್ವರ ತತ್ವ ಮೈಗೂಡಿಸಿಕೊಂಡಿರುವ ನೀವು ದಲಿತ ಸಾಹಿತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಮಾಡಬೇಕೆಂದು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ಹಣಕ್ಕೆ ಬೇಡಿಕೆಯಿಟ್ಟ ಆರೋಪ: ಹಾರೋಹಳ್ಳಿ ಪ. ಪಂ. ಮುಖ್ಯಾಧಿಕಾರಿ ಶ್ವೇತಾ ಅಮಾನತು
ಈ ಸಂದರ್ಭದಲ್ಲಿ ವೈ.ಎಸ್.ಪಡಸಲಗಿ, ತಮ್ಮಣ್ಣ ಕಾನಾಗಡ್ಡಿ, ರಾಮಪ್ಪ ನನ್ನಿಕೇರಿ ಇದ್ದರು.
