ದಸಂಸ ( ಅಂಬೇಡ್ಕರ್ ವಾದ ) ತಾಲೂಕು ಸಮಿತಿ ವತಿಯಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಕಚೇರಿ ಆವರಣದಲ್ಲಿ ದಲಿತರ ಭೂಮಿ – ವಸತಿ ಹಕ್ಕಿಗಾಗಿ ಹಕ್ಕೋತ್ತಾಯಿಸಿ ಶುಕ್ರವಾರ ಪ್ರತಿಭಟನೆ ಮಾಡಲಾಗಿದೆ.
ಫಾರಂ ನಂ. 50, 53, 57 ರಲ್ಲಿ ಅರ್ಜಿ ಸಲ್ಲಿಸಿರುವ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡದೆ ಶಾಸಕರ ಅಧ್ಯಕ್ಷತೆಯಲ್ಲಿರುವ ಬಗರ್ ಹುಕ್ಕುಂ ಸಮಿತಿಗಳು ನಿರ್ಲಕ್ಷ್ಯದಿಂದ ಸಭೆಗಳು ನಡೆಸದೆ ರಾಶಿಗಟ್ಟಲೆ ಅರ್ಜಿಗಳು ಕೊಳೆಯುತ್ತ ಬಿದ್ದಿವೆ.
ಹಾಗೆಯೇ, ತರೀಕೆರೆ ತಾಲೂಕಿನಲ್ಲಿ ಎಂಸಿ ಹಳ್ಳಿ ಗ್ರಾಮದ ಮಲ್ಲಯ್ಯನಕೆರೆ ಒತ್ತುವರಿ ಸಮಸ್ಯೆ ಬಗೆಹರಿಸದೆ ಕಾಲ ಹರಣ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಮತ್ತು ತರೀಕೆರೆ ತಾಲೂಕು ಕಚೇರಿಯಲ್ಲಿ ಪಿಟಿಸಿಎಲ್ ಕೇಸಿಗೆ ಸಂಬಂಧಿಸಿದ ಭೂ ದಾಖಲಾತಿಗಳು ಅಭಿಲೇೇಕಾಲಯದಲ್ಲಿ ದಾಖಲಾತಿಗಳು ಕಣ್ಮರೆಯಾಗುತ್ತಿದ್ದು ಇದಕ್ಕೆಲ್ಲ ಕಾರಣವಾಗುತ್ತಿರುವ ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕು. ಬಿ. ರಾಮನಹಳ್ಳಿ ಗ್ರಾಮದ ಗ್ರಾಮ ಠಾಣಾ ಒತ್ತುವರಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಲ್ಲಿನ ಪರಿಶಿಷ್ಟ ಜಾತಿಯವರಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು ಎಂದು ದಸಂಸ ಮುಖಂಡ ಎಚ್ ಎಸ್ ರಾಜಪ್ಪ ಈದಿನ.ಕಾಮ್ ಜೊತೆ ಮಾಹಿತಿ ವ್ಯಕ್ತಪಡಿಸಿದರು.
ಇದನ್ನೂ ಓದಿದೀರಾ?ಚಿಕ್ಕಮಗಳೂರು l ಸೌಜನ್ಯ ಪರ ಹೋರಾಟ: ಪ್ರತಿಭಟನೆಗೆ ನಿರಾಕರಿಸಿದ ಪೊಲೀಸ್ ಇಲಾಖೆ SDPI ಆರೋಪ
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಎಂ ಜೆ ರಾಮಚಂದ್ರ, ಸಂಘಟನೆಯ ಮುಖಂಡರಾದ ಅಣ್ಣಯ್ಯ, ತಾಲೂಕು ಸಂಘಟನಾ ಸಂಚಾಲಕರಾದ ಶಿವಕುಮಾರ್, ರಂಗೇನಹಳ್ಳಿ ವಿಜಯ್, ಕುಡ್ಲೂರು ಮುನಿಯಾ, ಅಹಿಂದ ಸಂಘಟನೆ ಮುಖಂಡರಾದ ಸುನಿಲ್ ಡಿ ಎನ್, ಹನುಮಂತು, ರಘು ಡಿ ಎನ್, ಇಸ್ಮಾಯಿಲ್ ರಂಗೇನಹಳ್ಳಿ, ಸಿದ್ದೀಕ್, ವಿ ರಾಮನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.