ಧಾರವಾಡ ಜಿಲ್ಲಾ ಕೋರ್ಟ್ ಸಂಕೀರ್ಣ ಸೇರಿದಂತೆ ಕುಂದಗೋಳ, ಕಲಘಟಗಿ, ನವಲಗುಂದ ನ್ಯಾಯಾಲಯ ಸಂಕೀರ್ಣಗಳಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುವುದಕ್ಕಾಗಿ ಮಾನವ ಸಂಪನ್ಮೂಲ ಒದಗಿಸಲು, ಮಾನವ ಸಂಪನ್ಮೂಲ ಏಜನ್ಸಿಗಳಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ.
ಸೀಲ್ ಬಂದ್ ಮಾಡಿದ ಟೆಂಡರ್ ಅರ್ಜಿಗಳನ್ನು ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆಗಸ್ಟ್ 05ರ ಸಂಜೆ 5:30ರ ಒಳಗಾಗಿ ಸಲ್ಲಿಸಬೇಕು. ಟೆಂಡರ್ ಅರ್ಜಿಗಳನ್ನು ಆಗಸ್ಟ್ 07ರ ಸಂಜೆ 5.30ಕ್ಕೆ ಜಿಲ್ಲಾ ನ್ಯಾಯಾಧೀಶರ ಕಚೇರಿಯಲ್ಲಿ ತೆರೆಯಲಾಗುವುದು ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಸೂಕ್ಷ್ಮ ಓದು ಇದೆಯೇ ಹೊರತು ಸಭ್ಯ ಅಸಭ್ಯ ಓದು ಎಂಬುದು ಇರಲು ಸಾಧ್ಯವೇ ಇಲ್ಲ – ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ
ಹೆಚ್ಚಿನ ಮಾಹಿತಿಗಾಗಿ http://dharwad.dcourts.gov.in/notice-category/tenders/ ವೆಬ್‍ಸೈಟ್‍ಗೆ ಭೇಟಿ ನೀಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
