ಹೆಣ್ಣು, ಹೊನ್ನು ಮಣ್ಣಿಗಾಗಿ ನಡೆಯದೆ ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ ಯುದ್ದ ವಿಶ್ವಕ್ಕೆ ಮಾದರಿಯಾಗಿದೆ. ಇಂದಿನ ಯುವ ಸಮುದಾಯ ಸ್ವಾಭಿಮಾನದ ಕಿಚ್ಚು ಬೆಳಸಿಕೊಳ್ಳಲು ಭೀಮಾ ಕೋರೆಗಾಂವ ಚರಿತ್ರೆ ಅರಿತುಕೊಳ್ಳಬೇಕು ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶಿವರಾಜ ಕುದುರೆ ಕರೆ ನೀಡಿದರು
ಬೀದರ್ ನಗರದ ಮೈಲೂರನ ವಿಶ್ವ ಶಾಂತಿ ಬುದ್ಧ ಅಭಿವೃದ್ಧಿ ಸಮಿತಿಯಿಂದ ನಡೆದ 206ನೇ ಭೀಮಾ ಕೋರೆಗಾಂವ ವಿಜಯೋತ್ಸವದ ಮೆರವಣಿಗೆಯನ್ನು ತಥಾಗತ್ ಗೌತಮ ಬುದ್ಧ ಜಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೀಮಾ ಕೋರೆಗಾಂವ ವಿಜಯೋತ್ಸವದ ಸವಿನೆನಪಿಗಾಗಿ ಮೈಲೂರನಲ್ಲಿ ವಿಶ್ವ ಶಾಂತಿ ಬುದ್ಧ ನಗರ ಮಹಾದ್ವಾರವು ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಸಂಜುಕುಮಾರ ಮೇತ್ರೆ, ಅಧ್ಯಕ್ಷ ರಾಜಕುಮಾರ ಭಾವಿಕಟ್ಟಿ ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ಅನಾವರಣಗೊಳಿಸಿದರು.
ಭೀಮಾ ಕೋರೆಗಾಂವ ವಿಜಯೋತ್ಸವ ಅಂಗವಾಗಿ ಹಳೆ ಮೈಲೂರ ಅಂಬೇಡ್ಕರ್ ಭವನದಿಂದ ಆರಂಭಗೊಂಡು ಬುದ್ದ ವಿಹಾರ, ಶಾಸ್ತ್ರಿ ನಗರ ಅಂಬೇಡ್ಕರ್ ಭವನ, ಗಾಂಧಿನಗರ ಅಂಬೇಡ್ಕರ್ ವೃತ, ಸಿಎಂಸಿ ಕಾಲೋನಿಯ ಅಂಬೇಡ್ಕರ್ ಭವನದ ಮಾರ್ಗವಾಗಿ ಮರಳಿ ಹಳೆ ಮೈಲೂರ ಅಂಬೇಡ್ಕರ್ ಭವನಕ್ಕೆ ಬಂದು ಕೊನೆಗೊಂಡಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ | ನಾಳೆಯಿಂದ ಪೆಟ್ರೋಲ್, ಡಿಸೇಲ್ ಸಿಗುತ್ತದೆ; ಸುಳ್ಳು ಸುದ್ದಿಗೆ ಕಿವಿಗೊಡಬಾರದು : ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಕಾರ್ಯಕ್ರಮದಲ್ಲಿ ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ಸಲಹೆಗಾರ ಶಂಬುಲಿಂಗ ಕುದರೆ, ಜಗನಾಥ ಬಡಿಗೇರ, ಸಹ ಕಾರ್ಯದರ್ಶಿ ಪ್ರಶಾಂತ ಭಾವಿಕಟ್ಟಿ, ಸದಸ್ಯರಾದ ಆಕಾಶ ಕುದುರೆ, ಸುನೀಲ ನವಲಸಪೂರ, ಮಹೇಶ ಗೋರನಾಳಕರ್, ಸುಜೀತ ವಂಟೆ, ಪ್ರಮುಖರಾದ ಕೋಳಾರ ಗ್ರಾ.ಪಂ ಸದಸ್ಯ ವಿಜಯಕುಮಾರ್ ಭಾವಿಕಟ್ಟಿ, ಸಂತೋಷ ಬ್ಯಾಗಿ, ಗುರು ಕುದುರೆ, ಅಜಯ ಕುದರೆ, ಶಾಲಿವಾನ ಬಡಿಗೇರ, ರಾಹುಲ್ ಹಳ್ಳಿಕರ್, ಅಮರ ವಂಟೆ, ಕಿಟ್ಟು ,ಭಾವಿಕಟ್ಟಿ , ಜಗನಾಥ ಗಾಯಕವಾಡ,ಸಿದ್ದಾರ್ಥ ಕೋಟೆರ್,ಪ್ರಕಾಶ ಭಾವಿಕಟ್ಟಿ, ರಾಹುಲ್ ಕುದರೆ, ಅಶ್ವಿನ್ ಪೂಜಾರಿ ಹಾಗೂ ಭೀಮಾ ಕೋರೆಗಾಂವ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಬುಧ್ದಾನಂದ ಬಡಿಗೇರ್, ಉಪಾಧ್ಯಕ್ಷ ಈಶ್ವರ ಬಡಿಗೇರ್ ಕಾರ್ಯದರ್ಶಿ ವಿಷ್ಣುಕಾಂತ ಪೂಜಾರಿ, ಖಜಾಂಚಿ ಶಿವಾನಂದ ಕುದುರೆ, ಇನ್ನಿತರರು ಉಪಸ್ಥಿತರಿದ್ದರು.