ಕಲ್ಲಚ್ಚು ಪ್ರಕಾಶನ ವತಿಯಿಂದ ಎಂ ಜಾನಕಿ ಬ್ರಹ್ಮಾವರ ಅವರ ತುಳು ಕಾದಂಬರಿ ಕಪ್ಪು ಗಿಡಿ ಇದರ ಎಸ್ ಎನ್ ಡಿ ಪೂಜಾರಿ ಗೋವಾ ಇವರು ಅನುವಾದಿಸಿದ ಇಂಗ್ಲಿಷ್ ಅನುವಾದ ದು ಬ್ಲಾಕ್ ಈಗಲ್ ಇಂದು ಉಡುಪಿಯ ಕಿದಿಯೂರ್ ಹೋಟಲ್ ನಲ್ಲಿ ಬಿಡುಗಡೆಗೊಂಡಿತು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಸಾಹಿತಿ ಪ್ರೊ ಮುರುಳಿಧರ್ ಉಪಾಧ್ಯಾಯ 1974ರಲ್ಲಿ ದೇವರಾಜು ಅರಸುರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದರು ಅದರಿಂದ ಸಮಾಜಕ್ಕೆ ಆದ ಪ್ರಯೋಜನ ಮತ್ತು ತುಳುನಾಡಿನಿಂದ ಮುಂಬೈಗೆ ಕೆಲಸಕ್ಕೆ ಹೋದ ಮತ್ತು ಅಲ್ಲಿಯೇ ಮದುವೆ ಆಗಿ ಸಂಸಾರ ನಡೆಸುತ್ತಿದ್ದ ಕುಟುಂಬದ ಚಿತ್ರಣವನ್ನು ಕಪ್ಪು ಗಿಡಿ ತುಳು ಕಾದಂಬರಿಯಲ್ಲಿ ಬಹಳ ಮಾರ್ನಿಕವಾಗಿ ಬಿಚ್ವಿಡಲಾಗಿದೆ ಈ ಕಾದಂಬರಿ ತುಳು ನಾಟಕ ಅಥವಾ ಚಲನಚಿತ್ರವಾಗಿ ಹೊರ ಬರಲಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಸಾಹಿತ್ಯ ಪರಿಷನ್ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ಎಂ ಜಾನಕಿ ಬ್ರಹ್ಮಾವರ್, ಕಾದಂಬರಿ ಅನುವಾದಕ ಎಸ್ ಎನ್ ಡಿ ಪೂಜಾರಿ ಮಾತನಾಡಿದರು. ಕಲ್ಲಚ್ಚು ಪ್ರಕಾಶನ ಮಂಗಳೂರು ಇದರ ಮಹೇಶ್ ಆರ್ ನಾಯಕ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
