ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪಟ್ಟಣದ ಡಾ ಬಿ ಅರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್ ಚಾಮರಾಜನಗರ, ತಾಲ್ಲೂಕು ಅಡಳಿತ, ತಾಲ್ಲೂಕು ಪಂಚಾಯತಿ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಹಾಗೂ ಅಂಗನವಾಡಿ ನೌಕರರ ಸಂಘದ ಸಹಯೋಗದೂಂದಿಗೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಬೇಟಿ ಬಚಾವೋ, ಬೇಟಿ ಪಡಾವೂ ಮತ್ತು ಟಿ ಎಲ್ ಎಂ ಪ್ರದರ್ಶನ ‘ ಕಾರ್ಯಕ್ರಮವನ್ನು ಶಾಸಕ ಹೆಚ್ ಎಂ ಗಣೇಶ್ ಪ್ರಸಾದ್ ಉದ್ಘಾಟಿಸಿ ‘ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹಿಳಾ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ ‘ ಎಂದರು.
” ಜಗತ್ತಿನಲ್ಲಿ ಮಹಿಳಾ ನಾಯಕತ್ವ ಅವಶ್ಯಕವಾಗಿದ್ದು, ಸಂಘರ್ಷವಿರುವ ಕಡೆಗಳಲ್ಲಿ ಶಾಂತಿಯನ್ನು ತರುವಂತಹ ಶಕ್ತಿ ಮಹಿಳೆಯರಿಗಿದೆ. ಎಲ್ಲಾರನ್ನು ಒಂದಾಗಿಸಿ ಮುನ್ನಡೆಸುವ ಶಕ್ತಿ ಮಹಿಳೆಯರಿಗೆ. ಇದೇ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಓ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಡಳಿತವನ್ನು ಸುಸೂತ್ರವಾಗಿ ನಡೆಸುತ್ತಿದ್ದಾರೆ ” ಎಂದರು.
” ತಾಲೂಕಿನಲ್ಲಿ ಶೇ 99% ಮಂದಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಕೇವಲ 1% ಮಾತ್ರ ಸಣ್ಣ ಪುಟ್ಟ ತೂಡಕುಗಳಿಂದ ಹೂರತು ಪಡಿಸಿದರೆ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ದೂರಕಿದೆ. ಜಿಲ್ಲಾ ಮತ್ತು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪದಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಶ್ರಮ ಹಾಗೂ ಕರ್ತವ್ಯ ನಿಷ್ಠೆಯಿಂದ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಕ್ಕೆ ಚಾಲನೆ ನೀಡಿದ ಸಚಿವ ಎನ್ ಎಸ್ ಭೋಸರಾಜು
ವಕೀಲೆ ಅಂಜಲಿ,ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಿ, ದೀಪ ಬುದ್ಧೆ, ಮಹೇಶ್ವರಿ, ದ್ರಾಕ್ಷಾಯಣಿಮ್ಮ, ಪುರಸಭಾ ಅಧ್ಯಕ್ಷ ಜಿಎಸ್ ಮಧುಸೂಧನ್, ಉಪಾಧ್ಯಕ್ಷ ಅಣ್ಣಯ್ಯ ಸ್ವಾಮಿ, ಪುರಸಭಾ ಸದಸ್ಯರಾದ ಶ್ರೀನಿವಾಸ್ ಕಣ್ಣಪ್ಪ ಎಚ್ ಆರ್, ರಾಜಗೋಪಾಲ್, ಮಹದೇವಮ್ಮ, ನಿರ್ಮಲ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್ ಆರ್ ಎಸ್ ರಾಜಶೇಖರ್, ಸದಸ್ಯ ಎಂ ಪ್ರದೀಪ್, ತಹಸೀಲ್ದಾರ್ ಟಿ ರಮೇಶ್ ಬಾಬು,ಕಾಡ ಮಾಜಿ ಅದ್ಯಕ್ಷ ಹಂಗಳ ನಂಜಪ್ಪ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಉಮಾಪತಿ,ಸದಸ್ಯರಾದ ವಿಜಯ ರಂಜನಿ, ಪುರಸಭೆಯ ಮುಖ್ಯ ಅಧಿಕಾರಿ ಕೆ ಪಿ ವಸಂತ್ ಕುಮಾರ್, ಸಿಡಿಪಿಓ ಹೇಮಾವತಿ ಸೇರಿದಂತೆ ಇನ್ನಿತರರು ಇದ್ದರು.