ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ಸಾವನಪ್ಪಿದ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬನ್ನಹಟ್ಟಿ ಗ್ರಾಮದ ಬಳಿ ಗುರುವಾರ ನಡೆದಿದೆ.
ಭೂಮಿಕಾ ದೊಡಮನಿ (8), ಶ್ರಾವಣಿ ನಾಟಿಕಾರ (11) ಮೃತ ಬಾಲಕಿಯರು ಎಂದು ಗುರುತಿಸಲಾಗಿದೆ.
ಗುರುವಾರ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿ, ಬಟ್ಟೆ ತೊಳೆದ ಬಳಿಕ ಈಜಾಡಲು ಮುಂದಾಗಿದ್ದರು. ಈ ವೇಳೆ ನದಿ ನೀರಿನ ರಭಸಕ್ಕೆ ಭೂಮಿಕಾ ದೊಡ್ಡಮನಿ ಎಂಬ ಬಾಲಕಿ ನೀರಿನಲ್ಲಿ ಮುಳುಗುವ ವೇಳೆ ಅವಳನ್ನು ರಕ್ಷಿಸಲು ಶ್ರಾವಣಿ ಮುಂದಾಗಿದ್ದಳು. ಆದರೆ, ನೀರಿನ ರಭಸಕ್ಕೆ ಇಬ್ಬರು ಬಾಲಕಿಯರು ಕೊಚ್ಚಿ ಹೋಗಿದ್ದಾರೆʼ ಎನ್ನಲಾಗಿದೆ.
ಸ್ಥಳಕ್ಕೆ ಅಫಜಲಪುರ ಠಾಣೆಯ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಶ್ರಾವಣಿ ಮೃತದೇಹ ತೆಗೆಯಲಾಗಿದ್ದು, ಇನ್ನೋರ್ವ ಬಾಲಕಿಯ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ʼಸೀತಾಫಲʼ ಹಣ್ಣಿಗೆ ಭಾರಿ ಬೇಡಿಕೆ; ಬೇಕಿದೆ ಸೂಕ್ತ ಮಾರುಕಟ್ಟೆ
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.