ಬೀದರ ಜಿಲ್ಲೆಯ 8 ಪೊಲೀಸ್ ಠಾಣೆಗಳಲ್ಲಿ ದಾಖಲಾದ ವಿವಿಧ 30 ಪ್ರಕರಣಗಳಲ್ಲಿ ಭಾಗಿಯಾದ 36 ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಹೇಳಿದರು.
ಶನಿವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,”ಬಂಧಿತ ಆರೋಪಿಗಳಿಂದ ಒಟ್ಟು 75.13 ಲಕ್ಷ ರೂ. ಮೌಲ್ಯದ ವಸುಗಳನ್ನು ಜಪ್ತಿ ಮಾಡಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದರು.
ಜಿಲ್ಲೆಯ ಜನವಾಡಾ ಪೊಲೀಸ್ ಠಾಣೆ, ನೂತನ ನಗರ ಪೊಲೀಸ್ ಠಾಣೆ, ಗಾಂಧಿ ಗಂಜ್ ಪೊಲೀಸ್ ಠಾಣೆ, ಹುಮನಾಬಾದ ಪೊಲೀಸ್ ಠಾಣೆ, ಚಿಟಗುಪ್ಪಾ ಪೊಲೀಸ್ ಠಾಣೆ, ಬಸವಕಲ್ಯಾಣ ನಗರ ಪೊಲೀಸ್ ಠಾಣೆ, ಹುಲಸೂರ ಪೊಲೀಸ್ ಠಾಣೆ, ಭಾಲ್ಕಿ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಬೇಧಿಸಿ ಅಂದಾಜು 26.77 ಲಕ್ಷ ರೂ. ಮೌಲ್ಯದ 495 ಗ್ರಾಂ.ಬಂಗಾರ, 18,600 ರೂ. ಮೌಲ್ಯದ 330 ಗ್ರಾಂ. ಬೆಳ್ಳಿ, 34,400 ರೂ. ನಗದು ಹಣ, 1 ಮೊಬೈಲ್, 10 ದ್ವಿಚಕ್ರ ವಾಹನ ಮತ್ತು 02 ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಸೆಂಟ್ರೀಂಗ್ ಪ್ಲೇಟ್, ಪ್ರಿಂಟ್ ಸೂಟ್ ಬಟ್ಟೆ, ನೀರಿನ ಪಂಪ್‌ಸೆಟ್, ಮೈಕ್ ಸೇಟ್, ಸೌಂಡ ಮಿಕ್ಸರ್ ಸೇರಿ ಒಟ್ಟು 75.13 ಬೆಲೆಯುಳ್ಳ ಸ್ವತ್ತನ್ನು ಜಪ್ತಿ ಮಾಡಿ ಒಟ್ಟು 36 ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕದ 1,008 ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ, ಬೀದರ್ ಡಿವೈಎಸ್‌ಪಿ ಶಿವಣ್ಣಗೌಡ ಪಾಟೀಲ, ಹುಮನಾಬಾದ ಡಿವೈಎಸ್‌ಪಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.