ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಉಪ ಪ್ರಾಚಾರ್ಯರ ಕಚೇರಿಗೆ ಕಳ್ಳರು ನುಗ್ಗಿ, ಡಿವಿಡಿ, ಬ್ಯಾಟರಿ ಸಹಿತ ಅಡುಗೆ ಎಣ್ಣೆ ಕಳವುಗೈದಿರುವ ಬಗ್ಗೆ ವರದಿಯಾಗಿದೆ.
ಸೋಮವಾರ ಬೆಳಗ್ಗೆ ಶಾಲೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದು ಬಂದಿದ್ದು, ಕಚೇರಿಯ ಬೀಗ ಮುರಿದು ಬ್ಯಾಟರಿ, ಡಿವಿಡಿ, ಅಡುಗೆ ಎಣ್ಣೆ ಪ್ಯಾಕೆಟ್ ಕದ್ದು ಬೀರುವಿನ ಬೀಗ ಮುರಿದು ಎಲ್ಲಾ ದಾಖಲಾತಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.

ಶಾಲೆಯ ಕಟ್ಟಡಕ್ಕೆ ನುಗ್ಗಿದ ಕಳ್ಳರು ಉಪ ಪ್ರಾಚಾರ್ಯರ ಕಚೇರಿ ಬೀಗ ಮುರಿದು ಎರಡು ಯುಪಿಎಸ್ ಬ್ಯಾಟರಿ, ಸಿಸಿ ಕ್ಯಾಮೆರಾ ಡಿವಿಡಿ ಹಾಗೂ ಅಡುಗೆ ಎಣ್ಣೆ 12 ಪ್ಯಾಕೆಟ್ ಕದ್ದೊಯ್ದಿರುವುದಾಗಿ ಶಿಕ್ಷಕರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳ ಮಹಜರು ನಡೆಸಿಯ ವೇಳೆ ಉಪ ಪ್ರಾಚಾರ್ಯರಾದ ಭವ್ಯ, ಸ್ಥಳೀಯ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಇದ್ದರು.

