ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ಜಮೀನಿನಲ್ಲಿದ್ದ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಮೂವರು ಸಾವಿಗೀಡಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹಡಲಗೇರಿ ಗ್ರಾಮದ ನೀಲಮ್ಮ ಹುಲಗಪ್ಪ ಖಿಲಾರಹಟ್ಟಿ (16), ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಶಿವಪ್ಪ ಯಳವಾರ (25) ಮೃತರು ಎಂದು ಗುರುತಿಸಲಾಗಿದೆ.
ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿಗೆ ಎಮ್ಮೆ ಮೇಯಿಸಲು ನೀಲಮ್ಮ ಹೋಗಿದ್ದರು. ಎಮ್ಮೆಗೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಬಂದಾಗ ಕಾಲು ಜಾರಿ ಬಿದ್ದಿದ್ದಾರೆ. ಅವರನ್ನು ರಕ್ಷಣೆಗಾಗಿ ಹೋದ ಸಂಬಂಧಿಕ ಮುತ್ತಪ್ಪ ಖಿಲಾರಹಟ್ಟಿ ಕೂಡ ಗುಂಡಿಯಲ್ಲಿ ಬಿದ್ದು ಮೇಲೆ ಬರಲಾಗದೇ ಪರದಾಟ ನಡೆಸಿದ್ದರು. ಇದನ್ನು ಕಂಡು ಇಬ್ಬರನ್ನು ಕಾಪಾಡಲು ಬಂದ ಶಿವು ಯಳವಾರ ಕೂಡ ನೀರು ಪಾಲಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಬೈಕ್‌ಗೆ ಟಿಪ್ಪರ್ ಲಾರಿ ಢಿಕ್ಕಿ: ದಂಪತಿ ಸಾವು; 8 ವರ್ಷದ ಮಗು ಪಾರು
ವಿಷಯ ತಿಳಿದು ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರ ಶವಗಳನ್ನು ಹೊರ ತೆಗೆದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.