ಸಂವಿಧಾನ ದಿನದ ಅಂಗವಾಗಿ ಅಮೂಲ್ಯವಾದ ಅಂಚೆ ಚೀಟಿ, ಲಕೋಟೆ, ನಾಣ್ಯಗಳ ಸಂಗ್ರಹ ಮಾಡಿರುವ ಎಚ್.ಕೆ. ಸತೀಶ್, ಪ್ರದರ್ಶನ ಏರ್ಪಡಿಸುವ ಮೂಲಕ ದೇಶದ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ ಗುರುಕುಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶಯ್ಯ ಎಸ್. ತಿಳಿಸಿದರು.
ತಿಪಟೂರು ನಗರದ ಶ್ರೀ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನದ ಅಂಗವಾಗಿ ಅಮೂಲ್ಯವಾದ ಅಂಚೆ ಚೀಟಿ, ಲಕೋಟೆ, ನಾಣ್ಯಗಳ ಸಂಗ್ರಹಿಸಿ ಪ್ರದರ್ಶನ ಏರ್ಪಡಿಸುವ ಮೂಲಕ ದೇಶದ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ, ವಿಶೇಷವಾದ ನಾಣ್ಯಗಳು, ಮತ್ತು ಸಂವಿಧಾನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಅಂಚೆ ಚೀಟಿ ಮತ್ತು ಲಕೋಟೆಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಎಚ್.ಕೆ. ಸತೀಶ್ ಅವರದ್ದು, ಕೋಲಾರ ಜಿಲ್ಲೆಯ ಮುಳಬಾಗಿಲು ಸದ್ಯ ಚನ್ನರಾಯಪಟ್ಟಣದ ನಿವಾಸಿ ಹಾಸನದ ಕೋರ್ಟ್‌ನಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಅಂಚೆ ಚೀಟಿ, ಲಕೋಟೆಗಳ ಸಂಗ್ರಹ ಅಷ್ಟು ಸುಲಭದ ಕೆಲಸವಲ್ಲ. 20 ವರ್ಷಗಳಿಂದ ಮುಂಬೈ, ಚೆನ್ನೈ, ಕೇರಳ, ಕೊಲ್ಕತ್ತಾ ಸೇರಿ ದೇಶದ ಅನೇಕ ಭಾಗಗಳಲ್ಲಿ ಸಂಚರಿಸಿ ನಾಣ್ಯಗಳು, ಅಂಚೆ ಚೀಟಿಗಳು, ಲಕೋಟೆಗಳು ಮತ್ತು ಸ್ವಾತಂತ್ರ್ಯ ಪೂರ್ವದ ಪುಸ್ತಕಗಳನ್ನು ಸಂಗ್ರಹಿಸಿ ಮಾದರಿಯಾಗಿದ್ದಾರೆ.

ಇವುಗಳ ಸಂಗ್ರಹಕ್ಕೆ ತಮ್ಮ ವೇತನದಲ್ಲಿ ಇಂತಿಷ್ಟು ಹಣವನ್ನು ಮೀಸಲಿಟ್ಟಿದ್ದಾರೆ. ಹಲವಾರು ಶಾಲಾ- ಕಾಲೇಜು, ಗಣರಾಜ್ಯೋತ್ಸವ ದಿನ.
ಸ್ವಾತಂತ್ರ್ಯ ದಿನಾಚರಣೆ, ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ರಾಜ್ಯೋತ್ಸವ ಸೇರಿ ಇದುವರೆಗೆ 109 ಕಡೆ ಪ್ರದರ್ಶನ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ.
ಅಪರೂಪದ ನಾಣ್ಯ ಸಂಗ್ರಹ :
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಮುಖ ಬೆಲೆಯ 10ಸಾವಿರ ನಾಣ್ಯಗಳು, ಗಾಂಧೀಜಿಯವರ ನಾಣ್ಯಗಳು, ಸುಭಾಷ್‌ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಒಂದು ಸಾವಿರ ನಾಣ್ಯಗಳನ್ನು ಸತೀಶ್ ಸಂಗ್ರಹಿಸಿದ್ದಾರೆ.
ಸ್ವತಂತ್ರ ಹೋರಾಟಗಾರರಾದ ದಾದಾಭಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ಕಸ್ತೂರಬಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಅಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ಕಿತ್ತೂರು ರಾಣಿ ಚನ್ನಮ್ಮ ಸೇರಿ 500ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ವಿಶೇಷವಾದ
ರಾಜ್ಯಮಟ್ಟದ ಅಂಚೆ ಚೀಟಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಸೇರಿ ಹಲವಾರು ಸಂಘ, ಸಂಸ್ಥೆಗಳು ಗೌರವಿಸಿವೆ.ಇವರ ಸೇವೆಯನ್ನು ಗುರುತಿಸಿ ಸರ್ಕಾರಗಳು ಪ್ರೋತ್ಸಾಹಿಸಬೇಕು ಎಂದು ವಿದ್ಯಾರ್ಥಿಗಳು ಉಪನ್ಯಾಸಕ ವರ್ಗದವರು ಒತ್ತಾಯಿಸಿದರು.
“ಮುಂದಿನ ಪೀಳಿಗೆಯ ಮಕ್ಕಳಿಗೆ ದೇಶದ ಇತಿಹಾಸದ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ನಾನು ದೇಶಾದ್ಯಂತ ಓಡಾಡಿ ಸಂಗ್ರಹಿಸಿರುವ ನಾಣ್ಯಗಳು ಅಂಚೆ ಚೀಟಿಗಳ ಲಕೋಟೆಗಳ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ನಾಣ್ಯ ಸಂಗ್ರಹಣಕಾರ ಎಚ್ ಕೆ ಸತೀಶ್ ತಿಳಿಸಿದರು.
ವರದಿ – ಮಿಥುನ್ ತಿಪಟೂರು
