ತಿಪಟೂರು | ಭಾರತಕ್ಕೆ ಪ್ರಜಾಪ್ರಭುತ್ವವೇ ಹೊಸಧರ್ಮ : ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ

Date:

Advertisements

ಭಾರತಕ್ಕೆ ಪ್ರಜಾಪ್ರಭುತ್ವವೇ ಹೊಸಧರ್ಮವಾಗಿದೆ, ಪ್ರೀತಿ ಹಾಗೂ ಸ್ವಾಭಿಮಾನದಿಂದ ಹೊಸ ಪ್ರಜಾಪ್ರಭುತ್ವ ಧರ್ಮಕಟ್ಟಿ ಬೆಳೆಸಬೇಕು ಎಂದು ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.

ತಿಪಟೂರು ನಗರದ ಜನಸ್ಪಂದನಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಜನಸಂಭ್ರಮ ಕಾರ್ಯಕ್ರಮದಲ್ಲಿ ತಿಪಟೂರು ಸಾಂಸ್ಕೃತಿಕ ನಾಯಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,  ಜಾತಿರಾಜಕಾರಣ, ಧರ್ಮರಾಜಕಾರಣ, ಭಾಷಾರಾಜಕಾರಣದ ಸೇರಿದಂತೆ ಎಲ್ಲಾ ಕ್ಷೇತ್ರಗಳಲೂ ಕಲುಷಿತವಾಗುತ್ತಿರುವ ಸಮಯದಲ್ಲಿ ರಾಜಕಾರಣ ಎಲ್ಲಾ ಬದಲಾವಣೆಗಳಿಗೂ ಮುಲಾಮು ಆಗಿದೆ. ನಮ್ಮ ರಾಜಕೀಯ, ಬದಲಾವಣೆಯ ಗಾಳಿಗೆ ಒಳಗಾಗಬೇಕು. ಪ್ರಜಾಪ್ರಭುತ್ವ ಭಾರತ ಹೊಸಧರ್ಮವಾಗಿದ್ದು ನಾವು, ಹೊಸಪ್ರಜಾಪ್ರಭುತ್ವ ಧರ್ಮವನ್ನು ಪ್ರೀತಿಯ ನೆಲೆಗಟ್ಟಿನಲ್ಲಿ ಕಟ್ಟುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

1000729703

ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಮಾತನಾಡಿ, ತಿಪಟೂರು ನೆಲ ಪ್ರತಿರೋಧದ ಗುಣಹೊಂದಿದೆ, ಅನೇಕ ಸಾಂಸ್ಕೃತಿಕ ನಾಯಕರಿಗೆ ಜನ್ಮ ನೀಡುವ ಜೊತೆಗೆ, ಭೂಮಿಕೆ ಹೊದಗಿಸಿದೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಜಕಾರಣಕ್ಕೆ ಹೊಸರೂಪಕೊಡುವ ಮೂಲಕ ಟೂಡ ಶಶಿಧರ್ ಮತ್ತು ತಂಡ ಹೊಸ ಬರವಸೆ, ಮೂಡಿಸಿದೆ ಎಂದು ತಿಳಿಸಿದರು.

Advertisements

ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ ಜನಸ್ಪಂದನಾ ಟ್ರಸ್ಟ್ ಹಲವಾರು ಸಹೃದಯಿ ಸ್ನೇಹಿತರೊಂದಿಗೆ, ಸಮುದಾಯಗಳೆಡೆಗೆ ನಮ್ಮ ನಡಿಗೆ ಘೋಷ ವಾಕ್ಯದೊಂದಿಗೆ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೋವಿಡ್ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೆ ನೆರವು ನೀಡುವ, ಜೊತೆಗೆ, ರಾಜ್ಯಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ನಡೆಸಿದ ಜನಚಳುವಳಿಯಲ್ಲಿ ನಮ್ಮ ಸಂಘಟನೆಯ, ಮಹತ್ವದ ಪಾತ್ರವಹಿಸಿದ ಹೆಮ್ಮೆ ನಮಗಿದೆ, ಎಲ್ಲ ಜನಚಳವಳಿ ಒಡನಾಡಿಗಳೊಂದಿಗೆ ಅನೇಕ ಮಹತ್ವದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆ ತಿಪಟೂರು ನಖರದಲ್ಲಿ ಜನಸ್ಪಂದನಾ ಟ್ರಸ್ಟ್ ನಿಂದ ಆಯೋಜಿಸಿದ್ದ ಜನಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಗಂಗಾಧರ್, ಕೇಂದ್ರ ಮಕ್ಕಳ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ನಟರಾಜ್ ಹೊನ್ನವಳ್ಳಿ, ಚಲನಚಿತ್ರ ಕಲಾವಿದ ವಿಷ್ಣುಕುಮಾರ್, ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್, ರಂಗಕಲಾವಿದೆ ರಾಜೇಶ್ವರಿ, ವಾಣಿ ಸತೀಶ್ ಮುಂತ್ತಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟಕರಾದ ಶ್ರೀಕಾಂತ್ ಕೆಳಹಟ್ಟಿ, ದಿಲಾವರ್, ಸತೀಶ್ ಕಾಡಶೆಟ್ಟಿಹಳ್ಳಿ, ಅಲ್ಲಾಭಕ್ಷ್ ಮುಂತಾದವರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X