ಎಪಿಎಂಸಿ ಮಾರುಕಟ್ಟೆಯ ಮುಖ್ಯ ದ್ವಾರದ ಬೀಗ ಮುರಿದು ಲಕ್ಷಾಂತರ ಮೌಲ್ಯದ ಉಂಡೆ ಕೊಬ್ಬರಿಯನ್ನು ಕಳ್ಳತನ ಮಾಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ.
ಕಳ್ಳರು ಘಟಕಿನಕೆರೆ ಮೂಲದ ನಾಗರಾಜು ಒಡೆತನಕ್ಕೆ ಸೇರಿದ ಗಂಗಾ ಟ್ರೇಡರ್ಸ್‌ನ ಅಂಗಡಿಯಿಂದ 3645 ಕೆ.ಜಿ. ತೂಕದ ಕೊಬ್ಬರಿಯನ್ನು ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಏಷ್ಯಾದಲ್ಲೇ ಅತಿದೊಡ್ಡ ಎಪಿಎಂಸಿ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದಿರುವ ತಿಪಟೂರು ಎಪಿಎಂಸಿಯಲ್ಲಿ ರಾತ್ರಿ ನಡೆದಿರುವ ಈ ಕಳ್ಳತನ ಮಾರುಕಟ್ಟೆಯ ಇತರೆ ಅಂಗಡಿಗಳ ಮಾಲಿಕರಿಗೆ ಭಯ ಹುಟ್ಟಿಸಿದರೆ, ಇಷ್ಟು ಭದ್ರತೆಯುಳ್ಳ ಈ ಮಾರುಕಟ್ಟೆಯಲ್ಲಿ ಕಾವಲುಗಾರರನ್ನು ಯಾಮಾರಿಸಿ ಲಾರಿಯಲ್ಲಿ ಲೋಡ್‌ಗಟ್ಟಲೆ ಕೊಬ್ಬರಿ ಹೊತ್ತೊಯ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಸುದ್ದಿ ಓದಿದ್ದೀರಾ?: ತಿಪಟೂರು | ಕೆ. ಜಿ. ಉಂಡೆ ಕೊಬ್ಬರಿಗೆ 1 ರೂ ಬೆಂಬಲ ಬೆಲೆ ಹೆಚ್ಚಳ : ಜ. 23 ರಂದು ರೈತರಿಂದ ಉಪವಾಸ ಸತ್ಯಾಗ್ರಹ
ಎಪಿಎಂಸಿ ಅಧಿಕಾರಿಗಳು, ತಿಪಟೂರು ಡಿವೈಎಸ್ಪಿ ವಿನಾಯಕ ಶೆಟಗೇರಿ, ನಗರಠಾಣೆ ವೃತ್ತ ನಿರೀಕ್ಷಕ ವೆಂಕಟೇಶ್, ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಸ್ಥಳಕ್ಕೆ ಭೇಟಿ ನೀಡಿದ್ದು, ಕಳ್ಳರ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
