ತಿಪಟೂರು | ದಲಿತ ಪತ್ರಕರ್ತನ ಮೇಲಿನ ಹಲ್ಲೆಗೆ ಖಂಡನೆ; ದಲಿತಪರ ಸಂಘಟನೆಗಳಿಂದ ಪ್ರತಿಭಟನೆ

Date:

Advertisements

ತುಮಕೂರಿನಲ್ಲಿ ಕಾರ್ಯನಿರತ ದಲಿತ ಪತ್ರಕರ್ತನ ಮೇಲೆ ಕಿಡಿಗೇಡಿ ಮಂಜುನಾಥ್ ತಾಳಮಕ್ಕಿ ಹಲ್ಲೆ ನಡೆಸಿದ್ದು, ದಲಿತವಿರೋಧಿ ಕೋಮುವಾದಿ ಪತ್ರಕರ್ತನ ವಿರುದ್ಧ ಗೂಂಡಾಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಿಪಟೂರು ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಹಶೀಲ್ದಾರ್ ಪವನ್ ಕುಮಾರ್ ಮನವಿ ಪತ್ರ ಸ್ವೀಕರಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಕೆ ಎಂ ಶಾಂತಪ್ಪ ಮಾತನಾಡಿ, “ತುಮಕೂರಿನಲ್ಲಿ ಜ಼ೀ ಟಿವಿ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಮಂಜುನಾಥ್ ಎಂಬುವವರಿಗೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿರುತ್ತಾನೆ. ಕೋಮುವಾದಿ ಮಂಜುನಾಥ್ ತಾಳಮಕ್ಕಿ ಕೊಳಕು ಜಾತಿಮನಸ್ಥಿತಿಯ ವ್ಯಕ್ತಿಯಾಗಿದ್ದು, ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವುದು, ಜಾತಿ ಧರ್ಮಗಳ ನಡುವೆ ಕೋಮು ವೈಷ್ಯಮ್ಯ ಬಿತ್ತುತ್ತ, ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿದ್ದಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

“ಕಾರವಾರ ತಾಲೂಕಿನ ತಾಳಮಕ್ಕಿ ಮೂಲದ ಈತ, ಈ ಹಿಂದೆ ಮಂಗಳೂರು, ಕಾರವಾರದಲ್ಲಿ ಕೋಮುವಾದಿ ಸಂಘಟನೆಗಳಲ್ಲಿ ಕೆಲಸ ಮಾಡುತ್ತ, ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪಬ್ಲಿಕ್ ಟಿವಿ ಮಾಧ್ಯಮವನ್ನು ಕೇವಲ ನೆಪಮಾತ್ರಕ್ಕೆ ಇಟ್ಟುಕೊಂಡು, ಕೆಲಸ ಮಾಡುತ್ತಿರುವ ಮಂಜುನಾಥ್ ತಾಳಮಕ್ಕಿ ಅಲಿಯಾಸ್ ಮಂಜುನಾಥ್ ನಾಯ್ಕ ವರದಿಗಾರನಾಗಿ ಮಂಡ್ಯದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯೂ ಇಬ್ಬರು ದಲಿತವರದಿಗಾರರ ಮೇಲೆ ಜಾತಿನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣವೂ ಇದೆ.

ದಲಿತ ಪತ್ರಕರ್ತನ ಮೇಲೆ ಹಲ್ಲೆಗೆ ಖಂಡನೆ 1

ಕೋಮುಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಸರ್ಕಾರ ಗೂಂಡಾಕಾಯ್ದೆ ದಾಖಲಿಸಿ ಈತನ ಪೂರ್ವಾಪರ ತನಿಖೆ ನಡೆಸಬೇಕು. ಮಾಧ್ಯಮಕ್ಷೇತ್ರಕ್ಕೆ ಮಾರಕ ಪಬ್ಲಿಕ್ ಟಿವಿ ಸಮಾಜದ ಮುಖವಾಣಿಯಂತೆ ಕೆಲಸ ಮಾಡುತ್ತಿದೆ. ಆದರೆ ಇಂತಹ ಪೂರ್ವಾಗ್ರಹ ಪೀಡಿತ ಜಾತಿವಾದಿ ಮನಸ್ಥಿತಿಯ ವ್ಯಕ್ತಿಗಳು ಕೆಲಸ ಮಾಡಿದರೆ, ನಮ್ಮ ಮಾಧ್ಯಮ ಸಂಸ್ಥೆಗೂ ಕೆಟ್ಟ ಹೆಸರು ಬರುತ್ತದೆ. ಕೂಡಲೇ ಪಬ್ಲಿಕ್ ಟಿವಿ ರಂಗನಾಥ್ ತಮ್ಮ ಮಾಧ್ಯಮ ಸಂಸ್ಥೆಯಿಂದ ಕೂಡಲೇ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು.

“ಪೊಲೀಸ್ ಹಾಗೂ ಸರ್ಕಾರ ಕೂಡಲೇ ಕಾನೂನು ಕ್ರಮಕೈಗೊಂಡು ಇಂತಹ ಸಮಾಜದ್ರೋಹಿಗಳನ್ನು ನಿಗ್ರಹಿಸದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ, “ಮಾಧ್ಯಮ ಕ್ಷೇತ್ರ ಸರ್ವ ಸಮಾಜಗಳನ್ನೂ ಸಮಾನವಾಗಿ ಕಾಣುವ ಮನೋಭಾವನೆ ರೂಡಿಸಿಕೊಳ್ಳಬೇಕು. ಆದರೆ ಮಂಜುನಾಥ್ ತಾಳಮಕ್ಕಿ ಎನ್ನುವ ಅವಿವೇಕಿ ಮಾಧ್ಯಮಕ್ಷೇತ್ರಕ್ಕೆ ನಾಲಯಕ್ ವ್ಯಕ್ತಿಯಾಗಿದ್ದು, ಕೋಮುವಾದಿ ಮನಸ್ಥಿತಿ ಹೊಂದಿದ್ದಾನೆ. ತುಮಕೂರಿನಲ್ಲಿ ಕೆಲಸ ಮಾಡುತ್ತಿರುವ ಸಮಯ ಮಂಜುನಾಥ್ ಮೇಲೆ ಹಲ್ಲೆ ಮಾಡುವ ಮೂಲಕ ತನ್ನ ಜಾತಿಮನಸ್ಥಿತಿ ತೋರ್ಪಡಿಸಿರುವ ಈತನ ವಿರುದ್ಧ ಸರ್ಕಾರ ಕೂಡಲೇ ಗೂಂಡಾಕಾಯ್ದೆ ಅಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿದರು

ಡಿಎಸ್ಎಸ್ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ, “ಮಾಧ್ಯಮ ಕ್ಷೇತ್ರ ಪವಿತ್ರವಾದ ಕ್ಷೇತ್ರ. ಸಮಾಜದ ಶೋಷಿತ ಸಮುದಾಯಗಳು, ಬಡವರು, ದೀನದಲಿತರ ಬಗ್ಗೆ ಕಾಳಜಿಯಿಂದ ಕೆಲಸ ಮಾಡಬೇಕು. ಆದರೆ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡಬೇಕಾದ ವರದಿಗಾರ ಅವಿವೇಕದಿಂದ ವರ್ತನೆ ಮಾಡಿರುವುದು ಖಂಡನೀಯ” ಎಂದರು.

“ಮಂಜುನಾಥ್ ತಾಳಮಕ್ಕಿ ಎನ್ನುವ ವ್ಯಕ್ತಿ ಕೋಮುವಾದಿ ಸಂಘಟನೆಗಳೊಂದಿಗೆ ತೊಡಗಿಕೊಂಡು ಸಮಾಜದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಹಲವಾರು ಬಾರಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಪ್ರಚೋದನೆಗಳನ್ನು ಮಾಡಿದ್ದಾನೆ. ಇಂತಹ ವ್ಯಕ್ತಿಯನ್ನು ಗೃಹ ಸಚಿವರು ಹೆಚ್ಚಿನ ತನಿಖೆಗೆ ಒಳಪಡಿಸಬೇಕು. ಈತನ ವಿರುದ್ಧ ಗೂಂಡಾಕಾಯ್ದೆ ದಾಖಲು ಮಾಡಬೇಕು. ಇಂತಹ ಕೋಮುವಾದಿಗಳನ್ನು ಆರಂಭದಲ್ಲೇ ಮಟ್ಟಹಾಕದಿದ್ದರೆ ಸಮಾಜಘಾತುಕ ಶಕ್ತಿಗಳಾಗಿ ಸಮಾಜ ಹಾಗೂ ದೇಶಕ್ಕೆ ಮಾರಕವಾಗುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಟಿ ಕೆ ಕುಮಾರ್ ಮಾತನಾಡಿ, “ಸಮಯ ಮಂಜುನಾಥ್ ಮೇಲಿನ ಹಲ್ಲೆ ಪ್ರಕರಣವನ್ನು ವಿಶೇಷ ತನಿಖೆಗೆ ಒಳಪಡಿಸಬೇಕು. ಪಬ್ಲಿಕ್ ಟಿವಿ ಮುಖ್ಯಸ್ಥರು ಮಂಜುನಾಥ್ ತಾಳಮಕ್ಕಿಯನ್ನು ಕೂಡಲೇ ವಜಾಗೊಳಿಸಬೇಕು. ಈತ ಈ ಹಿಂದೆಯೂ ದಲಿತ ಸಂಘಟನೆಗಳು ಹಾಗೂ ದಲಿತರ ಪ್ರತಿಭಟನೆಗಳನ್ನು ವರದಿ ಮಾಡದೆ ಜಾತಿವಾದಿ ಮನಸ್ಥಿತಿ ಪ್ರದರ್ಶನ ಮಾಡಿದ್ದಾನೆ” ಎಂದು ಆರೋಪಿಸಿದರು.

ಇದನ್ನೂ ಓದಿದ್ದೀರಾ? ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸ್ನಾತಕ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಾರಂಭ

ಪ್ರತಿಭಟನೆಯಲ್ಲಿ ಡಿಎಸ್ಎಸ್ ಸಂಚಾಲಕ ಜಕ್ಕನಹಳ್ಳಿ ಮೋಹನ್, ಮುಖಂಡರಾದ ಹರೀಶ್ ಯಗಚೀಕಟ್ಟೆ, ಸತೀಶ್ ಮಾರನಗೆರೆ, ಇರ್ಫಾನ್, ಮಹಿಳಾ ಸಂಚಾಲಕಿ ಕವಿತಾ ಮಹೇಶ್, ಸೀಮಾ, ಮತ್ತಿಘಟ್ಟ ಶಿಮಕುಮಾರ್, ಕಿರಣ್ ರಾಜ್ ಅರ್ಚನಹಳ್ಳಿ, ಡಿ ಆರ್ ಬಸವರಾಜು, ಕಾರ್ಮಿಕ ಮುಖಂಡ ಹೊನ್ನಪ್ಪ ಗ್ಯಾರಘಟ್ಟ, ಗ್ರಾ.ಪಂ ಅಧ್ಯಕ್ಷ‌ ಉದಯ್ ಕುಮಾರ್ ಕೊಪ್ಪ, ಆನಂದ್ ಕುಮಾರ್, ಬಸವರಾಜು ಗಾಂಧಿನಗರ, ರಮೇಶ್ ಮಾರನಗೆರೆ, ವೆಂಕಟೇಶ್ ಕರಡಾಳು ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X