ತಿಪಟೂರು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರ ಈ ನಾಡಿನ ಶೈವ-ವೈಷ್ಣವ ಧರ್ಮ ಸಂಗಮದ ಪರಮ ಪಾವನ ಪುಣ್ಯಕ್ಷೇತ್ರದ ಏಳನೆಯ ಶ್ರೀ ಗುರುಪರ ದೇಶಿಕೇಂದ್ರ ಮಹಾ ಸ್ವಾಮೀಜಿಯವರ ಜನ್ಮ ವರ್ಧಂತಿ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಪ್ಪ ತಿಳಿಸಿದರು.
ತಿಪಟೂರು ನಗರದ ಹೊರವಲಯದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 5 ಶನಿವಾರ ಬೆಳಗ್ಗೆ 11 ಗಂಟೆಗೆ ಶಂಕರೇಶ್ವರಸ್ವಾಮಿ, ಶ್ರೀ ರಂಗನಾಥಸ್ವಾಮಿ ಇಲ್ಲಿಯ ಆರಾಧ್ಯ ದೈವಗಳ ಮೆರವಣಿಗೆಯೊಂದಿಗೆ
ಈ ಕ್ಷೇತ್ರವನ್ನು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮುನ್ನಡೆಸುತ್ತಾ ಸರ್ವತೋಮುಖ ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಏಳನೆಯ
ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಯವರ 73 ನೇ ಜನ್ಮ ವರ್ಧಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ರೋಟರಿ ಕ್ಲಬ್ ತಿಪಟೂರು, ಮಹಾಲಕ್ಷ್ಮಿ ಸೆಂಟ್ರಲ್ ರೋಟರಿ ಕ್ಲಬ್ ಬೆಂಗಳೂರು, ಇವರ ಸಂಯುಕ್ತಾಶ್ರಯದಲ್ಲಿ, ವೈಭವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತಿಪಟೂರು, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ತನ್ಮಯಿ ಊಂಡ್ ಕೇರ್ ಕ್ಲಿನಿಕ್ ಬೆಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣೆ, ಶಸ್ತ್ರ ಚಿಕಿತ್ಸೆ ಮತ್ತು ಔಷಧಿ ವಿತರಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಮಸ್ತ ಭಕ್ತ ಬಂಧುಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಪೂಜ್ಯರ ದರ್ಶನಾಶೀರ್ವಾದ ಪಡೆದು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ತಿಪಟೂರು ತಾಲೂಕಿನ ಜನತೆ ಹಾಗೂ ರಂಗಾಪುರ ಸುತ್ತಮುತ್ತಲ ಗ್ರಾಮಸ್ಥರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಷಡಕ್ಷರ ಮಠ ರುದ್ರಮುನಿ ಸ್ವಾಮಿಗಳು, ಮಾಡಳು ಶ್ರೀ ಸ್ವಾಮಿಗಳು, ಗೋಡೆಕೆರೆ ಮಹಾಸಂಸ್ಥಾನ ಮಠದ ಮೃತ್ಯುಂಜಯ ಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರ ಅಭಿಮಾನಿಗಳಾದ ಕೆ ಆರ್ ಶಂಕರಪ್ಪ, ಎಂ.ಎನ್. ಶಶಿಧರ್, ಬಸವರಾಜು, ಲೋಕೇಶ್, ಪ್ರಾಂಶುಪಾಲರಾದ ಭರತ್, ಗಂಗಣ್ಣ ಹಾಜರಿದ್ದರು.