ಭೂಮಿಯನ್ನು ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಮಹಮ್ಮದ್ ಆರಿಫುಲ್ಲ ಸಿ.ಎಫ್ ತಿಳಿಸಿದರು.
ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹೊಸ ಪಟ್ಟಣ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ತಿಪಟೂರು ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕಲ ಜೀವರಾಶಿಗಳಿಗೆ ಆಶ್ರಯ ತಾಣವಾಗಿರುವ ಭೂಮಿಯನ್ನು ಪ್ರಸ್ತುತ ಮಾನವನು ತಮ್ಮ ಸ್ವಾರ್ಥ ಸಾಧನೆಯಿಂದ ಅದನ್ನು ಹಾಳು ಮಾಡುತ್ತಿದ್ದು, ಭೂಮಿಯನ್ನು ರಕ್ಷಣೆ ಮಾಡಬೇಕು ಎಂಬುದನ್ನು ಭಾರತದ ಸತ್ಪ್ರಜೆಯಾದ ನಾವುಗಳು ಎಲ್ಲರಲ್ಲಿಯೂ ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿಸಿದರು.
ಅಧಿಕ ಸಿವಿಲ್ ನ್ಯಾಯಾಧೀಶರಾದ ಮಧುಶ್ರೀ ಜಿ.ಎಸ್ ಮಾತನಾಡಿ ನಾವು ಒಬ್ಬೊಬ್ಬರೂ ಒಂದೊಂದು ಗಿಡ ನೆಡುವ ನಿಟ್ಟಿನಲ್ಲಿ ಸುತ್ತಮುತ್ತ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರ ಕರ್ತವ್ಯ ಅತ್ಯಧಿಕವಾದದ್ದು, ಅಲ್ಲದೆ ನಿರುಪಯುಕ್ತ ವಸ್ತುಗಳನ್ನು ಪರಿಸರದಲ್ಲಿ ಬಿಸಾಡದೇ ಅವೆಲ್ಲವನ್ನು ಒಂದೆಡೆ ಸಂಗ್ರಹಿಸಿ ನಾಶಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರಮುಖವಾಗಿ ಪ್ಲಾಸ್ಟಿಕ್ ಅನ್ನು ಬಳಸದೆ ಭೂಮಿಯನ್ನು ಸಂರಕ್ಷಣೆ ಗೊಳಿಸಬೇಕು ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘ ಅಧ್ಯಕ್ಷರು ಬಿ.ಎನ್ ಅಜಯ್, ಕಾರ್ಯದರ್ಶಿ ಬಿ ಮಲ್ಲಿಕಾರ್ಜುನಯ್ಯ, ನ್ನಿತರರು ಹಾಜರಿದ್ದರು..