ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಕಾಮಗಾರಿ ಮಾಡದೆಯೇ ಬಿಲ್ ಪಡೆಯಲಾಗಿದೆ, ಸರ್ಕಾರ ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಕುಪ್ಪಾಳು ಗ್ರಾಮಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ ಮೈಲಾರಸ್ವಾಮಿ ಒತ್ತಾಯಿಸಿದ್ದಾರೆ.
ಕುಪ್ಪಾಳು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗಿಣಕಿಕೆರೆ ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಸುತ್ತಲು ತಂತಿಬೇಲಿ ನಿರ್ಮಾಣ ಕಾಮಗಾರಿ ಮಾಡಲಾಗಿದೆ ಎಂದು ಆಗಸ್ಟ್ 2023ರಲ್ಲಿ ಬಿಲ್ ಪಡೆಯಲಾಗಿದೆ. ಆದರೆ ಯಾವುದೇ ಕಾಮಗಾರಿ ಮಾಡದೆ ಬಿಲ್ ಪಡೆದಿದ್ದಾರೆ. ಕೊಂಡ್ಲಿಘಟ್ಟ ಗ್ರಾಮದ ಶ್ರೀ ಯಲ್ಲಮ್ಮ ದೇವಿ ದೇವಾಲಯದಿಂದ ಶಂಕರಪ್ಪ ಬಿನ್ ಕಾಳಪ್ಪ ಎಂಬುವವರ ಮನೆವರೆಗೆ ಬಸಿಕಾಲುವೆ ನಿರ್ಮಾಣ ಕಾಮಗಾರಿ ಮಾಡಲಾಗಿದೆ ಎಂದು 69726 ರೂಪಾಯಿ ಬಿಲ್ ಪಡೆಯಲಾಗಿದ್ದು, ಯಾವುದೇ ಕಾಮಗಾರಿ ಮಾಡಲಾಗಿಲ್ಲ ಎಂದು ಆರೋಪಿಸಿದ್ದಾರೆ.
ತಿಪಟೂರು ನಗರದ ಎನ್.ಆರ್ ಕಂಪ್ಯೂಟರ್ ರವರಿಗೆ ಡಿಸಿಬಿ ಬಿಲ್ ನಂಬರ್ 35ರಂತೆ ಕಂಪ್ಯೂಟರ್ ಖರೀದಿಗೆ 93850 ರೂಪಾಯಿ ಹಾಗೂ ಅದೇ ದಿನ ಡಿಸಿಬಿ ಬಿಲ್ ನಂಬರ್ 39ರಲ್ಲಿ 93200ರೂಪಾಯಿ ಪಾವತಿ ಮಾಡಲಾಗಿದೆ, ಆದರೆ ಯಾವುದೇ ಕಂಪ್ಯೂಟರ್ ಖರೀದಿ ಮಾಡಿರುವುದಿಲ್ಲ,ನಮ್ಮ ಪಂಚಾಯಿತಿಯಲ್ಲಿ ಯಾವುದೇ ಹೊಸ ಕಂಪ್ಯೂಟರ್ ಗಳಿಲ್ಲ,ಆದರೂ ಬಿಲ್ ಪಡೆದಿದ್ದಾರೆ, ಕುಪ್ಪಾಳು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಹಾಗೂ ದುರಸ್ತಿಗೆ ಎಂದು ಮೂರು ಭಾರಿ ಬಿಲ್ ಪಡೆಯಲಾಗಿದ್ದು ,ನಮ್ಮ ಪಂಚಾಯಿತಿಯಲ್ಲಿ ಯಾವುದೇ ವಿಶೇಷ ಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮಾಡಿಲ್ಲ,ಎಲ್ಲಿ ಕಾಮಗಾರಿ ಮಾಡಲಾಗಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡದೆ ಬಿಲ್ ಪಡೆಯಲಾಗಿದೆ,ಏಪ್ರಿಲ್ ಹಾಗೂ ಮೇ 2025ರಲ್ಲಿ ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಬೋರ್ ವೆಲ್ ಮೋಟರ್ ಕೆಟ್ಟುಹೋಗಿವೆ ಎಂದು ರಿಪೇರಿ ಬಿಲ್ ಮಾಡಲಾಗಿದ್ದು. ರಿಪೇರಿ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡಿಲ್ಲ. ಕಡ್ಡಾಯವಾಗಿ ಎಲ್ಲ ಗ್ರಾಮಗಳಲ್ಲಿ ಬೋರ್ ವೆಲ್ ರಿಪೇರಿ ಜಿಪಿಎಸ್ ಪೋಟೊ ನೀಡಬೇಕು ಕುಪ್ಪಾಳು ಗ್ರಾಮಪಂಚಾಯ್ತಿಯಲ್ಲಿ ಕಾಮಗಾರಿ ಮಾಡದೇ ಲಕ್ಷಾಂತರ ರೂಪಾಯಿ ಬಿಲ್ ಪಡೆದಿದ್ದು ,ಅವ್ಯಾವಹಾರ ಮಾಡಿದ್ದಾರೇ ಕೂಡಲೇ ಗ್ರಾಮಪಂಚಾಯ್ತಿಯಲ್ಲಿ ನಡೆದಿರುವ ಪ್ರಕರಣ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು

ನಾನು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ಎನ್ನುವ ಕಾರಣಕ್ಕೆ ಆಡಳಿತ ನಡೆಸಲು ಬಿಡದೆ ಕೆಲವು ಗ್ರಾಮಪಂಚಾಯ್ತಿ ಸದಸ್ಯರು ತೊಂದರೆ ನೀಡುತ್ತಿದ್ದು, ಅನಾಗತ್ಯ ತೊಂದರೆ ನೀಡುತ್ತಿದ್ದಾರೆ,ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಶ್ರೀಪ್ರಸನ್ನಾತ್ಮ ರವರು ಕೆಲವೇ ಕೆಲವು ಸದಸ್ಯರ ಚಿತಾವಣೆಯಿಂದ ಆಡಳಿತ ನಡೆಸಲು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ,26 ಮೇ,2025ರಂದು ನಡೆದ ವಿಶೇಷ ಗ್ರಾಮಸಭೆಯಲ್ಲಿ ಸೇರದೆ ಇರುವ ಅಜೆಂಡಗಳಿಗೆ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ, ಸರ್ಕಾರ ಕೂಡಲೇ ಪ್ರಕರಣವನ್ನ ತನಿಖೆ ನಡೆಸ ಬೇಕು ಎಂದರು.
ಕುಪ್ಪಾಳು ಗ್ರಾಮಪಂಚಾಯ್ತಿ ಸದಸ್ಯೆ ರೂಪ ಮಾತನಾಡಿ ಗಿಣಕಿಕೆರೆ ಗ್ರಾಮದ ಅಂಬೇಡ್ಕರ್ ಭವನದ ಸುತ್ತಲು ತಂತಿಬೇಲಿ ನಿರ್ಮಾಣ ಕಾಮಗಾರಿ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿ ಮಾಡಿ ಬಿಲ್ ಪಡೆದಿದ್ದಾರೆ, ಆದರೆ ವಾಸ್ತವವಾಗಿ ಗಿಣಕಿಕೆರೆ ಅಂಬೇಡ್ಕರ್ ಭವನದ ಸುತ್ತ ಯಾವುದೇ ತಂತಿಬೇಲಿ ನಿರ್ಮಿಸಿಲ್ಲ, ಗಿಣಕಿಕೆರೆ ಕ್ಷೇತ್ರದ ಸದಸ್ಯೆಯಾದ ನನಗೆ ಸೋಷಿಯಲ್ ಆಡಿಟ್ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು,ಅದೇ ರೀತಿ ನಮ್ಮ ಪಂಚಾಯ್ತಿಯಲ್ಲಿ ನಮ್ಮ ಗಮನಕ್ಕೆ ಭಾರದೇ ಎಷ್ಟೋ ಬಿಲ್ ಪಡೆದಿರುವ ಶಂಕೆಯಿದ್ದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು
ಸದಸ್ಯೆ ಹೊನ್ನಮ್ಮ ಮಾತನಾಡಿ ಕುಪ್ಪಾಳು ಗ್ರಾಮಪಂಚಾಯ್ತಿ ಕೆಲಸ ಸದಸ್ಯರು ನನ್ನ ಸಹಿಯನ್ನ ಪೋರ್ಜರಿ ಮಾಡಿದ್ದಾರೆ ಈ ಬಗ್ಗೆ ತನಿಖೆ ಮಾಡುವಂತ್ತೆ ತಾಲ್ಲೋಕು ಪಂಚಾಯ್ತಿಗೆ ದೂರು ನೀಡಲಾಗಿದೆ. ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು