ತಿಪಟೂರು | ಸಯದ್ ಮೆಹಮೂದ್‌ ಸೌಹಾರ್ದತೆಯ ಪ್ರತೀಕ : ಟೂಡಾ ಶಶಿಧರ್

Date:

Advertisements

 ಭಾವೈಕ್ಯತೆಗೆ ಹೆಸರಾಗಿದ್ದ ಸಯದ್ ಮೆಹಮೂದ್ ಅವರ ವ್ಯಕ್ತಿತ್ವ ಇಂದಿನ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸೌಹಾರ್ದತೆ ಹೆಚ್ಚಾಗುತ್ತದೆ ಎಂದು ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟೂಡಾ ಶಶಿಧರ್ ತಿಳಿಸಿದರು.

ತಿಪಟೂರು ನಗರದ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಸೈಯದ್ ಮೆಹಮೂದು –ಒಂದು ನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೆಹಮೂದ್ ಸಾರ್ವಜನಿಕ ಜೀವನದಲ್ಲಿ ಗೆದ್ದಿದ್ದರು. ಅವರು ಎಂದೂ ಅಧಿಕಾರದ ಹಿಂದೆ ಹೋದವರಲ್ಲ. ಬಹಳ ವರ್ಷಗಳ ಹಿಂದೆಯೇ ನಗರದಲ್ಲಿ ಕೈಗಾರಿಕೋದ್ಯಮಿಯಾಗಿ ಬಹಳಷ್ಟು ಜನರಿಗೆ ಉದ್ಯೋಗ ನೀಡಿದ್ದ ಅವರು ಗಾಂಧೀನಗರ ಭಾಗದ ಜನರನ್ನು ಒಗ್ಗೂಡಿಸಿ ಅವರಿಗೆ ಶಕ್ತಿ ತುಂಬಿದರು. ನಗರಸಭೆಯ ಸದಸ್ಯರಾಗಿ ಆಯ್ಕೆಯಾದ ಮೇಲೆ ಅಧ್ಯಕ್ಷರಾಗುವ ಅವಕಾಶ ಸ್ವಲ್ಪದರಲ್ಲಿಯೇ ಕೈತಪ್ಪಿ ಉಪಾಧ್ಯಕ್ಷರಾಗಿ ಆಯ್ಕೆಯಾದರೂ ಅಧಿಕಾರದ ಹಿಂದೆ ಹೋಗಲಿಲ್ಲ. ಸಮಾಜದ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಹಗಲಿರುಳೂ ದುಡಿದ ಅವರು ಕುಟುಂಬದಲ್ಲಿಯೂ ಎಲ್ಲರ ಪಾಲಿಗೆ ಹೀರೋ ಆಗಿದ್ದುದು ವಿಶೇಷ. ಅವರ ಸುಂದರ ವ್ಯಕ್ತಿತ್ವವೇ ಇಂದಿನ ಕಾರ್ಯಕ್ರಮಕ್ಕೆ ಪ್ರೇರಣೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಮುಬಿನ್ ಮುನಾವರ್ ತಿಪಟೂರಿನ ಮಸೀದಿಗಳನ್ನು ಮೆಹಮೂದ್ ಯಾವ ರೀತಿ ಅಭಿವೃದ್ಧೀಪಡಿಸಿದರು ಎಂಬುದು ನಾವು ನೋಡಿದ್ದೇವೆ. ಹಿಡಿದ ಕೆಲಸಗಳನ್ನು ಪಟ್ಟು ಬಿಡದೇ ಮಾಡುವುದು ಅವರ ಜಾಯಮಾನ. ಮುಸಲ್ಮಾನರ ವಿದ್ಯಾಭ್ಯಾಸಕ್ಕಾಗಿ ಆಲ್-ಅಮೀನ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಅವರ ಕನಸನ್ನು ನಾವು ನನಸು ಮಾಡಬೇಕಿದೆ. ಮೆಹಮೂದ್ ಅವರ ನೆನಪಿಗಾಗಿ ಅವರ ಹೆಸರಿನಲ್ಲಿ ಶಾಲೆ ಲೈಬ್ರರಿ ಸ್ಥಾಪಿಸಬೇಕು. ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅವರ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ತರಬೇಕು. ಅವರ ಸಾಧನೆಗಳನ್ನು ಇಂದಿನ ಯುವ ಜನತೆಗೆ ಪರಿಚಯಿಸಬೇಕು. ಇದಕ್ಕೆ ನಾನೂ ಕೂಡ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು

Advertisements

ತುಮಕೂರಿನ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಸಮೀವುಲ್ಲ ಮಾತನಾಡಿ ಮೆಹಮೂದ್ ತಾವು ಉತ್ತಮ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗದಿದ್ದರೂ ಮನೆ-ಮನೆಗೂ ಭೇಟಿ ನೀಡಿ ಮುಸ್ಲಿಂ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದರು. ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ಕಟ್ಟಿದರು. ಮಸೀದಿ ನಿರ್ಮಾಣಕ್ಕೆ ಅದರ ನಿರ್ವಹಣೆಗೆ ನಿರಂತರ ಆದಾಯಕ್ಕಾಗಿ ಅಂಜುಮಾನ್ ಕಾಂಪ್ಲೆಕ್ಸ್ ಕಟ್ಟಿ ಸಮಾಜದ ಅಭಿವೃದ್ಧಿಗೆ ನೆರವಾದರು. ಅವರ ಕಾರ್ಯಕ್ರಮವನ್ನು ಜನಸ್ಪಂದನ ಟ್ರಸ್ಟ್ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ನಗರಸಭಾ ಸದಸ್ಯರಾದ ಶ್ರೀನಿವಾಸ್, ನಯೀಮ್ ಪಾಷ, ಮಹಮ್ಮದ್ ಗೌಸ್, ಕೆಕೆ ಕಾನ್ವೆಂಟ್‌ನ ತನ್ವೀರ್ ಸಹ್ಮದ್, ಮುತುವಲ್ಲಿ ಇಸ್ಮಾಯಿಲ್ ಮಾತನಾಡಿದರು.

 ಮುಖಂಡರಾದ, ಅಲ್ಲಾಬಕ್ಷ, ಅಬ್ದುಲ್ ಖುದೂಸ್, ಶ್ರೀಕಾಂತ್ ಕೆಳಹಟ್ಟಿ ಜನಸ್ಪಂದನಾ ಹಾಗೂ ಸೌಹಾರ್ಧ ಸದಸ್ಯರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X