ಲಾರಿ ಹಾಗೂ ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಬಳಿ ನಡೆದಿದೆ.

ಬೈಕ್ ವೊಂದು, ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಟೆನ್ ವ್ಹೀಲ್ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಲಾರಿಯಡಿಗೆ ಹೋಗಿ ಸಿಲುಕಿದೆ. ಬೈಕ್ ಸವಾರ ಕೂಡ ಚಕ್ರದಡಿಯಲ್ಲಿ ಸಿಲುಕಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಸುದ್ದಿ ಓದಿದ್ದೀರಾ?: ತೀರ್ಥಹಳ್ಳಿ | ಮಕ್ಕಳ ಮೌಲ್ಯಯುತ ಶಿಕ್ಷಣಕ್ಕೆ ಪೋಷಕರು ವಿಶೇಷ ಗಮನ ಹರಿಸಿ: ಸಚಿವ ಮಧು ಬಂಗಾರಪ್ಪ
ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಳೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
