ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಆರೋಪದ ಹಿನ್ನೆಲೆಯಲ್ಲಿ ಸರ್ಕಾರಿ ವಸತಿ ಶಾಲೆಯೊಂದರ ಶಿಕ್ಷಕನ ಮೇಲೆ ಫೋಕ್ಸೋ ಕೇಸು ದಾಖಲಾಗಿದೆ. ಸಂಗೀತ ಶಿಕ್ಷಕ ಇಮ್ತಿಯಾಝ್ (45) ನ ವಿರುದ್ಧ ಪೋಕ್ಸೋ ಆರೋಪ ಮಾಡಲಾಗಿದೆ.
ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ಹಾಗೂ ಅನುಚಿತ ರೀತಿಯಲ್ಲಿ ಶಾಲೆಯಲ್ಲಿ ಹಾಗೂ ಪ್ರವಾಸದ ವೇಳೆ ವರ್ತಿಸಿದ್ದ ಎಂಬುದಾಗಿ ವಿದ್ಯಾರ್ಥಿಗಳಿಂದ ವಸತಿ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಲಾಗಿದೆ.
ವಸತಿ ಶಾಲಾ ಪ್ರಾಂಶುಪಾಲರಿಂದ ಪೊಲೀಸರಿಗೆ ದೂರು ನೀಡಿದ್ದು, ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಇಮ್ತಿಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
