ಯಲಹಂಕ – ಧರ್ಮಾವರಂ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ, ಅ.11 ರಂದು ಬೆಂಗಳೂರಿನಿಂದ ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮತ್ತು ಧರ್ಮಾವರಂಗೆ ತೆರಳುವ ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್ (ಮೆಮು) ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ.
ಕೆ.ಎಸ್.ಆರ್ ಬೆಂಗಳೂರು – ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ – ಕೆ.ಎಸ್.ಆರ್ ಬೆಂಗಳೂರು (ರೈಲು ಸಂಖ್ಯೆ 06515/06516) ಮೆಮು ವಿಶೇಷ ರೈಲನ್ನು ಅ.11 ರಂದು ರದ್ದುಗೊಳಿಸಲಾಗಿದೆ.
ಕೆ.ಎಸ್.ಆರ್ ಬೆಂಗಳೂರು – ಧರ್ಮಾವರಂ – ಕೆ.ಎಸ್.ಆರ್ ಬೆಂಗಳೂರು (06595/ 06596) ಮೆಮು ರೈಲನ್ನು ಅ.11 ರಂದು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಮ್ಯಾರಥಾನ್ ಉದ್ಘಾಟಿಸಿದ ರಾಜ್ಯಪಾಲರು
ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲುಗಳು ಮೈಸೂರು ನಗರ ನಿಲ್ದಾಣದ ಬದಲು ದಸರಾ ಸಂದರ್ಭದಿಂದ ಮೈಸೂರು ನಗರದ 2ನೇ ಅತಿ ದೊಡ್ಡ ನಿಲ್ದಾಣ ಅಶೋಕಪುರಂ ನಿಲ್ದಾಣದಿಂದ ಸಂಚಾರ ನಡೆಸಲಿವೆ.