ತಿರುಪತಿ-ಔರಂಗಬಾದ್ ಮಧ್ಯ ಸಂಚರಿಸುವ 17621/17622 ಸಂಖ್ಯೆಯ ತಿರುಪತಿ-ಔರಂಗಬಾದ್ ಎಕ್ಸಪ್ರೆಸ್ ರೈಲು ಭಾಲ್ಕಿಯ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಇಲಾಖೆ ಆದೇಶ ನೀಡಿದೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದ್ದಾರೆ.
ತಿರುಪತಿ-ಔರಂಗಬಾದ್ ಎಕ್ಸಪ್ರೆಸ್ ರೈಲು ಭಾಲ್ಕಿಯಲ್ಲಿ ನಿಲುಗಡೆಗೆ ಹಲವು ದಿನಗಳಿಂದ ಭಾಲ್ಕಿ ಸೇರಿ ಸುತ್ತಮುತ್ತಲಿನ ಭಾಗದ ಜನರ ಬೇಡಿಕೆ ಇತ್ತು. ಈ ಬೇಡಿಕೆ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ.
ಇದು ತಿರುಪತಿ ಯಾತ್ರೆ ಕೈಗೊಳ್ಳುವ ಭಕ್ತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಟ್ರಾಯಲ್ ಆಧಾರದ ಮೇಲೆ ಸದ್ಯ ನಿಲುಗಡೆ ಇರಲಿದೆ. ಯಾತ್ರಾರ್ಥಿಗಳು ನೋಡಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೀದರ್ | ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾರ