ಬೀದರ್‌ | ವೈಚಾರಿಕ ಪ್ರಜ್ಞೆ ಜೀವಂತವಾಗಿಡುವ ಶಕ್ತಿ ಪಠ್ಯಗಳಿಗಿದೆ : ಭೀಮಾಶಂಕರ ಬಿರಾದರ್

Date:

Advertisements

ಸಮಾಜದಲ್ಲಿ ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ ಜೀವಂತವಾಗಿ ಇರಿಸುವ ಶಕ್ತಿ ಪಠ್ಯಗಳಿಗಿದೆ. ಒಂದು ಪಠ್ಯ ಕೃತಿ ಹಲವು ಆಯಾಮಗಳಲ್ಲಿ ಚರ್ಚಿತವಾದರೆನೇ ಅದಕ್ಕೊಂದು ಸಾಂಸ್ಕೃತಿಕ ಮಹತ್ವ ದಕ್ಕುತ್ತದೆ ಎಂದು ಬಸವಕಲ್ಯಾಣದ ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

ಕರ್ನಾಟಕ ಕಾಲೇಜು ಕನ್ನಡ ವಿಭಾಗ, ಬರಹಗಾರರ ಮತ್ತು ಕಲಾವಿದರ ಸಂಘ ಮತ್ತು ಬೀದರ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಯೋಗದಲ್ಲಿ ಬೀದರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೀದರ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನ್ ಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಬದುಕು ಬರಹ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ಡಾ. ಹೆಬ್ಬಾಳೆ ಅವರ ಪಠ್ಯ ಕೃತಿಗಳು ಕುರಿತು ಮಾತನಾಡಿದರು.

ʼಹಲವು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಅನುಸಂಧಾನ ಮಾಡಿದ ಬೀದರ ಜಿಲ್ಲೆಯ ಬುಲಾಯಿ ಹಾಡುಗಳು, ಜನಪದ ಹಾಡುಗಳ ಸಂಗ್ರಹ, ಜನಪದ ಕತೆಗಳ ಸಂಗ್ರಹ ಕೃತಿಗಳಲ್ಲಿ ನೆಲ ಸಂಸ್ಕೃತಿಯ ಚಿಂತನೆ, ದೇಶಿವಾದದ ನೋಟಕ್ರಮ ಹಾಗೂ ಮಾನವೀಯ ಸಂಬಂಧಗಳ ರೂಪಕಗಳನ್ನು ಕಾಣಿಸುತ್ತವೆ. ಕನ್ನಡ ಸಾಂಸ್ಕೃತಿಕ ಪರಂಪರೆ, ಚಾರಿತ್ರಿಕ ಒತ್ತಡಗಳು, ಅಂದಿನ ಕಾಲಘಟ್ಟದ ಬದುಕಿನ ಮೌಲ್ಯಗಳು ಹಳಗನ್ನಡ ಪಠ್ಯದ ಮೂಲಕ ವಿದ್ಯಾರ್ಥಿಗಳನ್ನು ಮುಖಾಮುಖಿಯಾಗಿಸಿದ್ದಾರೆ. ಸಂಶೋಧನಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರಿತವಾದ ಪಠ್ಯ ಕೃತಿಗಳು ಸಂಗ್ರಹಿಸಿ ವಿದ್ಯಾರ್ಥಿಗಳ ಓದಿಗೆ ಪ್ರೊ. ಹೆಬ್ಬಾಳೆ ಒದಗಿಸಿದ್ದಾರೆʼ ಎಂದರು.

Advertisements

ʼಬೀದರ ಮಣ್ಣಿನಲ್ಲಿ ಸಮಾಜವಾದದ ಎಳೆಯೊಂದು ಜೀವಂತವಾಗಿಟ್ಟ, ಲೋಹಿಯಾ ಅವರ ಒಡನಾಡಿ ಆರ್. ವಿ. ಬಿಡಪ್ ಅವರ ಕನ್ನಡ, ಕರ್ನಾಟಕ ಮತ್ತು ಅವರಲ್ಲಿ ಅಡಗಿದ ಈ ನೆಲದ ಪ್ರೀತಿಯ ಹಾಗೂ ಕಾಳಜಿಯ ಕಥನವನ್ನು ಆರ್.ವಿ.ಬಿಡಪ್ ಅವರ ಜೀವನ ಕಥನದಲ್ಲಿ ಹೆಬ್ಬಾಳೆ ಕಟ್ಟಿ ಕೊಟ್ಟಿದ್ದಾರೆ. ದೇಸಿ ಪ್ರಜ್ಞೆ, ನೇಟಿವಿಸಮ್, ಮಾನವೀಯತೆ ಹೆಬ್ಬಾಳೆಯವರ ಪಠ್ಯಕೃತಿಗಳ ತಾತ್ವಿಕತೆಯಾಗಿದೆʼ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಮಾತನಾಡಿ, ʼಜಾನಪದ, ಅಭಿನಂದನಾ, ಸ್ಮರಣ ಸಂಚಿಕೆ ಸೇರಿ ಹಲವು ಕೃತಿಗಳು ಸಂಪಾದಿಸಿದ ಹೆಬ್ಬಾಳೆ ಅವರದು ಸಾಹಿತ್ಯದ ಮುಖ ಒಂದು ಕಡೆಯಲ್ಲಿದ್ದರೆ, ಇನ್ನೊಂದು ಕಡೆಗೆ ಅವರು ಮಾನವೀಯ ಸಂಬಂಧಗಳ ಸಂಪಾದನೆ ಅಪಾರವಾಗಿ ಮಾಡಿಕೊಂಡಿದ್ದಾರೆ. ಅವರ ಸಂಪಾದನ ಕೃತಿಗಳ ಮೂಲಕ ಹಲವು ದಿಗಜ್ಜರ ಸಾಹಿತ್ಯ ಮತ್ತು ಸಾಧನೆ ಬಿಂಬಿಸಿದ್ದಾರೆʼ ಎಂದು ನುಡಿದರು.

ಬೀದರ ವಿವಿ ಕನ್ನಡ ವಿಭಾಗದ ಸಂಯೋಜಕ ಡಾ.ರಾಮಚಂದ್ರ ಗಣಾಪೂರ ಮಾತನಾಡಿ, ʼಹೆಬ್ಬಾಳೆ ಅವರ ಸ್ವತಂತ್ರ ಕೃತಿಗಳ ಕುರಿತು ಹೆಬ್ಬಾಳೆ ಅವರದು ಬರಹ ಮತ್ತು ಬದುಕು ಎರಡೂ ಸೃಜನಶೀಲವಾಗಿವೆ. ಅವರು ಬರೆದ ಕವನ ಸಂಕಲನ ಬದುಕಿನ ಹಲವು ವಾಸ್ತವಗಳನ್ನು ದರ್ಶಿಸುತ್ತವೆ. ಕವಿತೆಗಳು, ಕತೆ, ಜೀವನ ಚರಿತ್ರೆ, ಸ್ಥಳ ಮಹತ್ವ, ಪ್ರಬಂಧ ಸೇರಿ ಸಾಹಿತ್ಯದ ಹಲವು ಪ್ರಕಾರಗಳು ಬರೆದು ಸಾಹಿತ್ಯ ಲೋಕದ ಗಮನ ಸೆಳೆದಿದ್ದಾರೆʼ ಎಂದರು.

ಹೆಬ್ಬಾಳೆಯವರ ಸಂಶೋಧನಾ ಪ್ರಬಂಧಗಳ ಕುರಿತು ಯುವ ಬರಹಗಾರ ಕಿರಣ ವಲ್ಲೆಪೂರೆ ಮಾತನಾಡಿ, ʼಪ್ರೊ. ಜಗನ್ನಾಥ ಹೆಬ್ಬಾಳೆ ಅವರ ಸಂಶೋಧನೆ ಕ್ಷೇತ್ರಕಾರ್ಯ ಕೇಂದ್ರೀತವಾಗಿದೆ. ಅವರ ಮಾರ್ಗದರ್ಶನದಲ್ಲಿ ನಡೆದ ಎಲ್ಲ ಪಿ.ಎಚ್.ಡಿ. ಪ್ರಬಂಧಗಳು ಜಾನಪದ ಜಗತ್ತಿಗೆ ಹಾಗೂ ಬೀದರ ಜಿಲ್ಲೆಯ ಮಹತ್ವ ಸಾರುವ ಸಂಶೋಧನಾ ಪ್ರಬಂಧಗಳಾಗಿವೆ. ಬೀದರ ನೆಲ, ಸಂಸ್ಕೃತಿ ಹಾಗೂ ಜಾನಪದ ಇವೆರಡೂ ಹೆಬ್ಬಾಳೆ ಅವರ ಸಾಹಿತ್ಯದ ಜೀವಾಳವಾಗಿವೆʼ ಎಂದರು.

ಈ ಸುದ್ದಿ ಓದಿದ್ದೀರಾ? ಹೊರಗುತ್ತಿಗೆ ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಮಾಡಿ: ರಾಜ್ಯದ ಹಲವೆಡೆ ದಸಂಸದಿಂದ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಡಾ.ರಮೇಶ್ ಮೂಲಗೆ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀದರ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ ನಾಯ್ಕ್, ವಾಣಿಜ್ಯ ನಿಕಾಯದ ಡೀನ ಡಾ. ಶರಣಪ್ಪ ಮಲಗೊಂಡ ಹಾಗೂ ಡಾ.ಪ್ರಭುಶಟ್ಟಿ ಮೂಲಗೆಲಗೆ, ಶಾಂತಕುಮಾರ ಪಾಟೀಲ, ಡಾ.ಸೋಮನಾಥ ಯಾಳವಾರ, ಪ್ರೊ.ಉಮಾಕಾಂತ ಪಾಟೀಲ, ಪ್ರೊ.ಜಗನ್ನಾಥ ಹೆಬ್ಬಾಳೆ, ಡಾ.ಅಶೋಕ ಕೋರೆ ಸೇರಿ ಹಲವರಿದ್ದರು. ಡಾ.ಮಹಾನಂದಾ ಮಡಕಿ ನಿರೂಪಿಸಿದರು. ಡಾ.ಶಿವರಾಜ್ ಪಾಟೀಲ್ ಸ್ವಾಗತಿಸಿದರು. ರಾಜಕುಮಾರ ಶಿಂಧೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X