ಜಿಲ್ಲೆಯ ಎಲ್ಲ ಕೃಷಿ ಮಾರ್ಗಗಳಿಗೆ, ಪ್ರತಿದಿನ ಐದು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುಲಾಗುವುದು ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ರೈತರಿಗೆ ಭರವಸೆ ನೀಡಿದರು.
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಸ್ಕಾಂ ಅಧಿಕಾರಿಗಳು ಮತ್ತು ರೈತ ಮುಖಂಡರೊಂದಿಗೆ ಸೋಮವಾರ ಸಭೆ ನಡೆಸಿ ಅವರು ಮಾತನಾಡಿದರು.
ಸಂಜೆಯ ವೇಳೆಯಲ್ಲಿ ಕೃಷಿಯ ಲೈನ್‌ನಲ್ಲಿ ಬರುವ, ತೋಟದ ಮನೆಗಳಿಗೆ ಲೈಂಟಿಗ್ ವ್ಯವಸ್ಥೆಗಾಗಿ, ಸಂಜೆ ಆರರಿಂದ ಬೆಳಿಗ್ಗೆ ಆರರವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡುವುದು. ಸಿಂಗಲ್ ಫೇಸ್ ಅವಧಿಯಲ್ಲಿ, ಯಾವುದೇ ಕಾರಣಕ್ಕೂ ತೋಟದ ಮನೆಯ ದೀಪದ ಬಳಕೆಯನ್ನು ಹೊರತುಪಡಿಸಿ ಯಾವುದೇ ಪಂಪ್ ಸೆಟ್‌ಗಳನ್ನು ಬಳಸಬಾರದು ಎಂದು ಸೂಚಿಸಿದರು.
ವಿಫಲವಾದ ಪರಿವರ್ತಕಗಳನ್ನು, ನಿಗಧಿತ ಅವಧಿಯಲ್ಲಿ ಬದಲಾಯಿಸಲು ಮತ್ತು 11ಕೆವಿ ಮತ್ತು ಎಲ್.ಟಿ ಮಾರ್ಗಗಳಿಗೆ ಅಡಚಣೆಯಾಗುವ ಮರಗಿಡಗಳನ್ನು ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲಾ ರೈತ ಮುಖಂಡರಿಗೆ, ಹಾಲಿ ವಿದ್ಯುತ್ ವ್ಯವಸ್ಥೆಯ ಬಗ್ಗೆ ಸಹಕರಿಸುವಂತೆ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಸಭೆಯಲ್ಲಿ ಬೆಸ್ಕಾಂ ನಿರ್ದೇಶಕ ಎಚ್.ಜೆ. ರಮೇಶ್, ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಗೋವಿಂದಪ್ಪ, ದಾವಣಗೆರೆ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್, ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳು, ರೈತ ಮುಖಂಡರು ಸಭೆಯಲ್ಲಿ ಇದ್ದರು.